Kumta| ಉತ್ತರಕನ್ನಡ ಜಿಲ್ಲೆಯ ಕುಮಟಾದ ಬಾಡ ಶ್ರೀ ಕಾಂಚಿಕಾಂಬ ದೇವರ ಜಾತ್ರೆ ವಿಜ್ರಂಭಣೆಯಿಂದ ನಡೆಯಿತು. ಉತ್ತರಕನ್ನಡ ಜಿಲ್ಲೆಯ ಪ್ರಮುಖ ಶಕ್ತಿ ಪೀಠಗಳಲ್ಲೊಂದಾದ ಬಾಡದ ಶ್ರೀ ಕಾಂಚಿಕಾಂಬಾ ದೇವರ ಜಾತ್ರೆಯಲ್ಲಿ ಸಾವಿರಾರು ಜನ ಭಾಗವಸಿ ದೇವಿಯ ದರ್ಶನ ಪಡೆದು ಪುನೀತರಾದರು.
ಕಳೆದ ಹತ್ತು ದಿನದ ಹಿಂದೆಯೇ ಜಾತ್ರೆಯ ಧಾರ್ಮಿಕ ಕಾರ್ಯ ಪ್ರಾರಂಭವಾಗಿದ್ದು ಜಾತ್ರೆಯ ಅಂತಿಮ ದಿನವಾದ ಇಂದು ಶ್ರೀ ಕಾಂಚಿಕಾ ಪರಮೇಶ್ವರಿ ದೇವಿಯ ಸನ್ನಿಧಿಯಲ್ಲಿ ವಿವಿಧ ಧಾರ್ಮಿಕ ಕೈಕಂರ್ಯಗಳು ನಡೆದವು. ಭಕ್ತರು ಉಡಿ ಸೇವೆ, ಹಣ್ಣುಕಾಯಿ, ಬಾಳೆಗೊನೆ ಸೇವೆ ಜೊತೆಗೆ ದೇವಿಗೆ ಅರಿಶಿಣ ಕುಂಕುಮ ಸೇವೆ ಸಮರ್ಪಿಸಿದರು.
ಬೆಳಗ್ಗೆಯಿಂದಲೇ ಸಾವಿರಾರು ಭಕ್ತರು ದೇವಸ್ಥಾನದಲ್ಲಿ ವಿವಿಧ ಸೇವೆ ಸಲ್ಲಿಸಲು ಸರದಿಯಲ್ಲಿ ಸಾಗಿದರು. ಹೆಣ್ಣು ಮಕ್ಕಳಿಂದ ಆರತಿ ಸೇವೆ, ತುಲಾಭಾರ ಮತ್ತು ಉರುಳು ಸೇವೆ ವಿಶೇಷವಾಗಿ ಗಮನ ಸೆಳೆಯಿತು.
ಸಾಯಂಕಾಲ ಕಾಂಚಿಕಾಂಬೆಯನ್ನು ಭವ್ಯ ರಥದ ಮೇಲೆ ಕುರಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ರಥಕ್ಕೆ ಬಾಳೆ ಹಣ್ಣು ಹಾಗೂ ಕಡಲೆಕಾಳು ಹೊಡೆದರೆ ಇಷ್ಟಾರ್ಥ ಸಿದ್ದಿಯಾಗುತ್ತದೆ ಎಂಬದು ಭಕ್ತರ ನಂಬಿಕೆ. ಆ ಹಿನ್ನೆಲೆಯಲ್ಲಿ ಸೇರಿದ್ದ ಸಾವಿರಾರು ಜನರು ರಥಕ್ಕೆ ಕಡಲೆಕಾಳು ಹಾಗೂ ಬಾಳೆ ಹಣ್ಣು ಎಸೆದು ದೇವಿಯ ಕೃಪೆಗೆ ಪಾತ್ರರಾದರು. ರಥೋತ್ಸವದಲ್ಲಿ ದೇವಿಯ ಪರಿವಾರ ದೇವರ ಕಳಶದ ಮೆರವಣಿಗೆ ಹಾಗೂ ಚಂಡೆವಾದ್ಯ ಭಕ್ತರ ಗಮನ ಸೆಳೆಯಿತು.
