Bangalore| ಹೊರಗುತ್ತಿಗೆ ಆಧಾರಿತ ಸೇವೆಯಲ್ಲಿರುವ ನೌಕರರಿಗೆ ಯಾವುದೇ ಆತಂಕ ಬೇಡ. ಹೊರಗುತ್ತಿಗೆ ನೌಕರರ ಕಡಿಮೆಗೊಳಿಸುವ ಬಗ್ಗೆ ಸರ್ಕಾರ ಯಾವುದೇ ಆದೇಶ ಹೊರಡಿಸಿಲ್ಲ ಎಂದು ರಾಜ್ಯ ಆರ್ಥಿಕ ಇಲಾಖೆಯ ಸರ್ಕಾರದ ಅಧೀನ‌ ಕಾರ್ಯದರ್ಶಿ ಸ್ಪಷ್ಟೀಕರಣ ನೀಡಿದ್ದಾರೆ.

ಸರ್ಕಾರದಲ್ಲಿ ಹೊರಗುತ್ತಿಗೆ ಆಧಾರಿತ ಸಿಬ್ಬಂದಿಯ ಸೇವೆಯನ್ನು ಮುಂದುವರೆಸುವ ಬಗ್ಗೆ ಆರ್ಥಿಕ ಇಲಾಖೆಯ ಅಧಿಕೃತ ಜ್ಞಾಪನದ ಮಾದರಿಯಲ್ಲಿ, ನಕಲಿಯಾಗಿ ಸಂ.ಆಇ/ಸೇನಿ/08/2026 ದಿನಾಂಕ: 24-03-2026 ಸಂಖ್ಯೆಯಲ್ಲಿ ಅನಧಿಕೃತವಾಗಿ ಸೃಷ್ಟಿಸಿ ಸಾಮಾಜಿಕ ಜಾಲತಾಣಗಲ್ಲಿ ಹರಿಬಿಟ್ಟಿದ್ದಾರೆ. ಕೆಲವು ಮಾಧ್ಯಮಗಳು, ಆನ್‌ಲೈನ್ ಆವೃತ್ತಿಗಳು ಹಾಗೂ ಸಾಮಾಜಿಕ ಮಾಧ್ಯಮಗಳು ನೈಜತೆ ಪರಿಶೀಲಿಸದೆ. ಈ ಸುದ್ದಿಯನ್ನು ಪ್ರಕಟಿಸಿವೆ.

ಆದರೆ ಸರ್ಕಾರದ ಇಂತಹ ಯಾವುದೇ ಆದೇಶ ಅಥವಾ ಅಧಿಕೃತ ಜ್ಞಾಪನ ಪತ್ರ ಹೊರಡಿಸಿಲ್ಲ , ಈ ನಕಲಿ ಜ್ಞಾಪನ ಪತ್ರ ಅಧಿಕೃತವಲ್ಲ ಎಂದು ಆರ್ಥಿಕ ಇಲಾಖೆಯ ಸರ್ಕಾರದ ಅಧೀನ‌ ಕಾರ್ಯದರ್ಶಿ ಎಂ.ರಾಜಮ್ಮ ಪ್ರಕಟಣೆ ಮೂಲಕ‌ ಸ್ಪಷ್ಟಪಡಿಸಿದ್ದಾರೆ.