ಕಾರವಾರ: ತಾಲೂಕಿನ ದೇವಭಾಗ ಕಡಲತೀರದಲ್ಲಿ ಬುಧವಾರ ಸಂರಕ್ಷಿಸಲ್ಪಟ್ಟ 163 ಕಡಲಾಮೆ ಮರಿಗಳನ್ನು ಸಮುದ್ರಕ್ಕೆ ಯಶಸ್ವಿಯಾಗಿ ಬಿಡುಗಡೆ ಮಾಡಲಾಯಿತು.
ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಕಾರವಾರ ವಿಭಾಗದ ಮಾರ್ಗದರ್ಶನದಲ್ಲಿ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ಕಾರವಾರ ಉಪವಿಭಾಗ ಅವರ ಸಲಹೆ ಸೂಚನೆ ಮೇರೆಗೆ ಕೋಸ್ಟಲ್ & ಮರೈನ್ ಇಕೋ ಸಿಸ್ಟಮ್ ಸೆಲ್ ನಿಂದಿ ಕಳೆದ ಒಂದು ತಿಂಗಳ ಹಿಂದೆ ಕಡಲಾಮೆ ಮೊಟ್ಟೆಗಳನ್ನು ಸಂರಕ್ಷಿಸಿ ಇಡಲಾಗಿತ್ತು. ಇಂದು ಮೊಟ್ಟೆಯಿದ ಹೊರಬಂದ ಮರಿಗಳನ್ನು ಕಡಲಿಗೆ ಬಿಡಲಾಯಿತು.
ಇಂದು ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ರವಿಶಂಕರ್ ಸಿ. (IFS), ಜಿಲ್ಲಾಧಿಕಾರಿಗಳಾದ ಲಕ್ಷ್ಮೀ ಪ್ರಿಯಾ (IAS), ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ದೀಪನ್ ಎಂ.ಎನ್. (IPS), ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಕೆ.ಡಿ. ನಾಯ್ಕ್, ಮೊಹಿಲಾ ವೆಂಕಟ್, ವಲಯ ಅರಣ್ಯಾಧಿಕಾರಿಗಳಾದ ಗಜಾನನ ನಾಯ್ಕ ಹಾಗೂ ಕಿರಣ್ ಮನವಚಾರಿ (RFO, C&M Karwar) ಸೇರಿದಂತೆ ಹಲವು ಅಧಿಕಾರಿಗಳು, ಪ್ರಾಣಿಪ್ರಿಯರು ಹಾಗೂ ಸ್ಥಳೀಯ ಮೀನುಗಾರರು ಇದ್ದರು.
ಈ ಸಂದರ್ಭದಲ್ಲಿ ಕೋಸ್ಟಲ್ & ಮರೈನ್ ಇಕೋ ಸಿಸ್ಟಮ್ ಸೆಲ್‌ನ ಉಪ ವಲಯ ಅರಣ್ಯಾಧಿಕಾರಿಗಳು, ಗಸ್ತು ಅರಣ್ಯ ಸಿಬ್ಬಂದಿ ಸಹಕರಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಗೂಡಿನಿಂದ ಒಟ್ಟು 76 ಹಾಗೂ ಅಂಕೋಲಾ ಭಾಗದಿಂದ 87 ಸೇರಿ 163 ಕಡಲಾಮೆ ಮರಿಗಳನ್ನು ಸುರಕ್ಷಿತವಾಗಿ ಸಮುದ್ರಕ್ಕೆ ಬಿಡಲಾಯಿತು.
