Sirsi| ಶಿರಸಿ-ಕುಮಟಾ ರಸ್ತೆಯ ಕೊಳಗಿಬೀಸ್ ಸಮೀಪ ಏ.3 ಶುಕ್ರವಾರ ಮಧ್ಯಾಹ್ನ ಸಂಭವಿಸಿದ ಸಾರಿಗೆ ಸಂಸ್ಥೆ ‌ಬಸ್ ಹಾಗೂ ಖಾಸಗಿ ಬಸ್ ನಡುವೆ ಸಂಭವಿಸಿದ ಮುಖಾಮುಖಿ ಅಪಘಾತ ಪ್ರಕರಣದಲ್ಲಿ ಖಾಸಗಿ ಬಸ್ ಚಾಲಕನ FIR ದಾಖಲಾಗಿದೆ.

ಭಟ್ಕಳ ಘಟಕದ ವಾ.ಕ.ರ.ಸಾ ಸಂಸ್ಥೆಯ ಬಸ್ (ಕೆಎ-31 ಎಫ್-1640) ಕೊಳಗಿಬೀಸ್ ಸಮೀಪ ಎದುರಿನಿಂದ ಬಂದ ಖಾಸಗಿ ಬಸ್ (ಕೆಎ-40 ಬಿ-8054) ಚಾಲಕನು ಅತಿ ವೇಗ ಹಾಗೂ ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿಕೊಂಡು ಟಿಪ್ಪರನ್ನು ಓವರ್‌ಟೇಕ್ ಮಾಡಲು ಯತ್ನಿಸಿದಾಗ, ಎದುರಿನಿಂದ ಬರುತ್ತಿದ್ದ ಸರ್ಕಾರಿ ಬಸ್‌ಗೆ ಡಿಕ್ಕಿ ಹೊಡೆದಿದ್ದ. ಅಪಘಾತದಲ್ಲಿ ಸರ್ಕಾರಿ ಬಸ್‌ನಲ್ಲಿದ್ದ ಕೆಲ ಪ್ರಯಾಣಿಕರು ಗಾಯಗೊಂಡಿದ್ದರು. ಗಾಯಾಳುಗಳಿಗೆ ಸಾರಿಗೆ ಸಂಸ್ಥೆಯ ವತಿಯಿಂದ ತುರ್ತು ಪರಿಹಾರ ನಿಧಿ ನೀಡಲಾಗಿದೆ.

ಈ ಅಪಘಾತಕ್ಕೆ ವಾ.ಕ.ರ.ಸಾ ಬಸ್ ಚಾಲಕರ ಯಾವುದೇ ತಪ್ಪಿಲ್ಲವೆಂದು ಸಂಸ್ಥೆ ಸ್ಪಷ್ಟಪಡಿಸಿದ್ದು, ಅತೀವೇಗ, ನಿರ್ಲಕ್ಷ್ಯತನದ ಚಾಲನೆ ಹಿನ್ನೆಲೆಯಲ್ಲಿ ಖಾಸಗಿ ಬಸ್ ಚಾಲಕನ ವಿರುದ್ಧ FIR ದಾಖಲಿಸಲಾಗಿದೆ ಎಂದು ಸಾರಿಗೆ‌ ಸಂಸ್ಥೆ ಪ್ರಕಟಣೆ ತಿಳಿಸಿದೆ.