Sirsi| ಹಾವು ಕಚ್ಚಿ ಶಾಲಾ ಬಾಲಕನೊಬ್ಬ ಸಾವನ್ನಪ್ಪಿದ್ದು, ಆತನ ಸಹೋದರಿ ತೀವ್ರ ಅಸ್ವಸ್ಥಳಾದ ಘಟನೆ ತಾಲೂಕಿನ ಬನವಾಸಿಯ ಸಹಸ್ರಳ್ಳಿಯಲ್ಲಿ ನಡೆದಿದೆ.
ಆರನೇ ತರಗತಿಯ ವಿದ್ಯಾರ್ಥಿಯಾಗಿದ್ದ ಮಿಥುನ್ ಪುಟ್ಟಪ್ಪ ನಾಯ್ಕ (12) ಹಾವಿನ ಕಡಿತಕ್ಕೊಳಗಾಗಿ ಸಾವನ್ನಪ್ಪಿದ ಬಾಲಕ.
ಮೃತನ ಸಹೋದರಿ ದಿಕ್ಷಾ ಪುಟ್ಟಪ್ಪ ನಾಯ್ಕ ಗೂ ಸಹ ಹಾವು ಕಡಿದಿದ್ದು
ತೀವ್ರ ಅಸ್ವಸ್ಥಳಾಗಿದ್ದು, ದಿಕ್ಷಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮೃತ ಬಾಲಕ ಮಿಥುನ್ ಮತ್ತು ಆತನ ಸಹೋದರಿ ದಿಕ್ಷಾ ರಾತ್ರಿ ಊಟಮಾಡಿ ತಂದೆಯ ಜೊತೆಯಲ್ಲಿ ಮಲಗಿದ್ದರು.
ಈ ಸಂದರ್ಭದಲ್ಲಿ ಮಿಥುನ್ ಮತ್ತು ಆತನ ಸಹೋದರಿ ಏಕಾಏಕಿ ಎದ್ದು ವಾಂತಿ ಮಾಡಲು ಆರಂಭಿಸಿದರು. ಆಗ
ಇದನ್ನು ಗಮನಿಸಿದ ಪಾಲಕರು ಲೈಟ್ ಹಾಕಿ ನೋಡಿದಾಗ ಮಕ್ಕಳಿಬ್ಬರು ವಾಂತಿ ಮಾಡುತ್ತಿರುವದನ್ನು ಗಮನಿಸಿ ಅಕ್ಕಪಕ್ಕದವರಿಗೆ ತಿಳಿಸಿದ್ದಾರೆ. ಅವರು ಬರುವಷ್ಟರಲ್ಲಿ ಹಾವೊಂದು ಮನೆಯೊಳಗಿಂದ ಕತ್ತಲಲ್ಲಿ ಹೋಗಿರುವದು ಕಂಡು ಬಂದಿದೆ.
ತಕ್ಷಣಕ್ಕೆ ಮಕ್ಕಳನ್ನು ರಾತ್ರೋರಾತ್ರಿ ಸರಕಾರಿ ಆಸ್ಪತ್ರೆಗೆ ತಂದು ಚಿಕಿತ್ಸೆ ನೀಡಿದ್ದಾರೆ. ಆದರೆ ಬಾಲಕ ಮಿಥುನ್ ಗೆ ಚಿಕಿತ್ಸೆ ಫಲಕಾರಿಯಾಗದೇ ದಾರಿ ಮದ್ಯದಲ್ಲಿಯೇ ಸಾವನ್ನಪ್ಪಿದ್ದಾನೆ.
ಬನವಾಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
