ಭುವನೇಶ್ವರ: ಕಾರವಾರ ಕ್ಷೇತ್ರದ ಶಾಸಕ ಸತೀಶ ಸೈಲ್ ಪುತ್ರಿ ಸಾಧ್ವಿ ಸತೀಶ್ ಅವರು ಓರಿಸ್ಸಾದ ಭುವನೇಶ್ವರದಲ್ಲಿ ನಡೆದ ಫೆಮಿನಾ ಮಿಸ್ ಇಂಡಿಯಾ 2026 ರ ಚಾಂಪಿಯನ್ನ್ ಆಗಿದ್ದಾರೆ

ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2026 (Femina Miss India 2026) ಸ್ಪರ್ಧೆಯ 61ನೇ ಭವ್ಯ ಅಂತಿಮ ಸಮಾರಂಭವು ಭುವನೇಶ್ವರದ ಕಳಿಂಗಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (Kalinga Institute of Industrial Technology-KIIT) ಆವರಣದಲ್ಲಿ ಅದ್ದೂರಿಯಾಗಿ ನಡೆದ ಕಾರ್ಯಕ್ರಮದಲ್ಲಿ ಸಾಧ್ವಿ ಸತೀಶ್ ಫೆಮಿನಾ ಮಿಸ್ ಇಂಡಿಯಾ ಕಿರೀಟ ಗಳಿಸಿದ್ದಾರೆ.

ಈ ಸ್ಪರ್ಧೆಯಲ್ಲಿ ಸಾಧ್ವಿ ಸತೀಶ್ ಸೈಲ್  ಅವರು ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2026 ಕಿರೀಟವನ್ನು ಮುಡಿಗೇರಿಸಿಕೊಂಡರು. ಅವರು ಮುಂದಿನ ಮಿಸ್ ವರ್ಡ್ 2027 (Miss World 2027) ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಮಹಾರಾಷ್ಟ್ರದ ರಾಜನಂದಿನಿ ಪವಾರ್ (Rajnandini Pawar) ಪ್ರಥಮ ರನ್ನರ್-ಅಪ್ ಆಗಿ ಮತ್ತು ಯುನಿಯನ್ ಟೆರಿಟರಿಯ ಶ್ರೀಅದ್ವೈತಾ (Sree Advaita) ದ್ವಿತೀಯ ರನ್ನರ್-ಅಪ್ ಆಗಿ ಆಯ್ಕೆಯಾಗಿದ್ದಾರೆ.

ವಿಜೇತೆ ಬಗ್ಗೆ ಮಾಹಿತಿ: ಸಾಧ್ವಿ ಸತೀಶ್ ಸೈಲ್ ಅವರು ಗೋವಾದ ಉದ್ಯಮಿ ಹಾಗೂ ಮೋಡಲ್ ಆಗಿದ್ದು, ಕ್ಯಾಲಿಫೋರ್ನಿಯಾ, ಬುರಿಟೋ ಸೇರಿದಂತೆ ಹಲವು ಬ್ರಾಂಡ್‌ಗಳ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಅವರು ನಿರ್ಮಾಣ ಹಾಗೂ ಅಭಿವೃದ್ಧಿ ಕ್ಷೇತ್ರದಲ್ಲಿ ಸಹ-ಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ವರ್ಷದ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆ ದೇಶದ ವಿವಿಧ ರಾಜ್ಯಗಳ ಪ್ರತಿಭಾವಂತ ಯುವತಿಯರನ್ನು ಒಂದೇ ವೇದಿಕೆಯಲ್ಲಿ ಸೇರಿಸಿ, ಅವರ ಸೌಂದರ್ಯ, ಬುದ್ಧಿಮತ್ತೆ ಮತ್ತು ವ್ಯಕ್ತಿತ್ವವನ್ನು ಪ್ರತಿಬಿಂಬಿಸುವ ವೇದಿಕೆಯಾಗಿತ್ತು.

ಮಿಸ್ ಇಂಡಿಯಾ ಕಿರೀಟ ವಿಜೇತೆಯಾದ ಮಗಳಿಗೆ ಕಾರವಾರ ಶಾಸಕ ಸೈಲ್ ಅವರು ವಿಡಿಯೋ ಕಾಲ್  ನಲ್ಲಿ ಅಭಿನಂದಿಸಿದರು.