ಕುಮಟಾದ ಪುರಭವನದಲ್ಲಿ ಜಿಲ್ಲಾಮಟ್ಟದ ಮಾಹಿತಿ ಹಕ್ಕು ಕಾರ್ಯಕರ್ತರ ವೇದಿಕೆಯನ್ನು ವಿದ್ಯುಕ್ತವಾಗಿ ಉದ್ಘಾಟನೆ ಮಾಡಲಾಯಿತು.
ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಪ್ರಣವ್ ಹೆಗಡೆ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನೂರಾರು ಜನ ಪಾಲ್ಗೊಂಡಿದ್ದರು. “ಜನರಿಗೆ ಮಾಹಿತಿ ಹಕ್ಕು ಅಧಿನಿಯಮದ ಅರಿವು ಮೂಡಿಸುವುದ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತರಿಗೆ ಸಹಾಯ ಸಹಕಾರ ನೀಡುವ ಉದ್ದೇಶದಿಂದ ಈ ಮಾಹಿತಿ ಹಕ್ಕು ಕಾರ್ಯಕರ್ತರ ವೇದಿಕೆ ಅಸ್ತಿತ್ವಕ್ಕೆ ತರಲಾಗಿದೆ. ಈ ವೇದಿಕೆಯ ಸದುಪಯೋಗವನ್ನು ಸಾರ್ವಜನಿಕರು ಬಳಸಿಕೊಳ್ಳಬೇಕು ಎಂದು ವೇದಿಕೆ ಜಿಲ್ಲಾ ಅಧ್ಯಕ್ಷ ಪ್ರಣವ್ ಹೆಗಡೆ ಕಾರ್ಯಕ್ರಮದಲ್ಲಿ ಉಪಸ್ಥಿರತರಿರುವ ಸಭಿಕರಿಗೆ” ಹೇಳಿದರು.
“ಆಡಳಿತ ವ್ಯವಸ್ಥೆಯಲ್ಲಿ ಬ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಹಾಗೂ ಪಾರದರ್ಶಕ ಆಡಳಿತ ತರಲು ಸಾರ್ವಜನಿಕರು ಹೆಚ್ಚಾಗಿ ಮಾಹಿತಿಹಕ್ಕಿನ ಲಾಭ ಪಡೆಯಬೇಕು. ಇತ್ತೀಚಿಗೆ ಮಾಹಿತಿಹಕ್ಕು ಕಾಯಿದೆಯಡಿ ಕೇಳಿದ ದಾಖಲೆಯನ್ನು ಅಧಿಕಾರಿಗಳು ಸಮರ್ಪಕವಾಗಿ ನೀಡುತ್ತಿಲ್ಲ. ಹಾರಿಕೆಯ ಉತ್ತರ ನೀಡುತ್ತಾರೆ. ಇದಕ್ಕೆ ಪ್ರಮುಖ ಕಾರಣ ಸಾರ್ವಜನಿಕರಿಗೆ ಮಾಹಿತಿ ಹಕ್ಕು ಕಾಯಿದೆಯ ಸರಿಯಾದ ಅಧ್ಯಯನವಿಲ್ಲವಾಗಿದೆ. ಆ ಹಿನ್ನೆಲೆಯಲ್ಲಿ ನಮ್ಮ ವೇದಿಕೆ ಸಾರ್ವಜನಿಕರಿಗೆ ಮಾಹಿತಿ ಹಕ್ಕಿನ ಅರಿವು ಮೂಡಿಸಲಾಗುವುದು” ಎಂದರು.
ಕಾರ್ಯಕ್ರಮದಲ್ಲಿ ಪವನ ಗುನಗಾ, ಡಾ. ರವಿರಾಜ ಕಡ್ಲೆ, ಸಾಮಿಕ ಹೋರಾಟಗಾರ ಭಾಸ್ಕರ ಪಟಗಾರ, ವೇದಿಕೆಯ ಮಹಿಳಾ ಘಟಕದ ಅಧ್ಯಕ್ಷೆ ಸವಿತಾ ಮುಕ್ರಿ, ತಿಮ್ಮಪ್ಪ ಮುಕ್ರಿ ಸೇರಿದಂತೆ ಅನೇಕರು ಇದ್ದರು.
