Gokarn| Immigration and Foreigners Act 2025|ವಿದೇಶಿ ಪ್ರವಾಸಿಗರು ಹೋಂ ಸ್ಟೇ ದಲ್ಲಿ ತಂಗಿರುವ ಮಾಹಿತಿ ನೀಡದೇ ನಿಯಮ ಉಲ್ಲಂಘಿಸಿರುವ ಅಪರಾಧದ ಮೇಲೆ ಗೋಕರ್ಣದಲ್ಲಿ ಪೋಲಿಸರು ಹೋಂ ಸ್ಟೇ ಮಾಲಿಕರ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಗೋಕರ್ಣದ ಭೀಮಕೊಂಡದ ವೈಲ್ಡ್ ವಿಲೇಜ್ ಸ್ಟೇ (Wild Village Stay) ಮಾಲಿಕ ಸೋಮಾ ಗಣಪು ಗೌಡ ಹಾಗೂ ವ್ಯವಸ್ಥಾಪಕ ಗಣೇಶ ಸೋಮಾ ಗೌಡ ಇವರ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಈ ಆಪಾದಿತರ ವೈಲ್ಡ್ ವಿಲೇಜ್ ಸ್ಟೇ ನಲ್ಲಿ ಅರ್ಜೆಂಟೈನಾದ ಸ್ಯಾಂಟಿಗೋ ಆಸ್ಕರ್ ಲ್ಯುಕೆ ಮೆರ್ಲೊ ಹಾಗೂ ಈತನ ತಾಯಿ ಕಳೆದ ಎರಡು ದಿನಗಳಿಂದ ಉಳಿದುಕೊಂಡಿದ್ದಾರೆ.
ಈ ಬಗ್ಗೆ ಹೋಂ ಸ್ಟೇ ನ ಮಾಲಿಕರು, ವಿದೇಶಿ ಪ್ರಜೆಗಳು ತಂಗಿದ ಬಗ್ಗೆ, ‘ಸಿ’ ಫಾರ್ಮ ಭರ್ತಿ ಮಾಡಿ ಮಾಹಿತಿಯನ್ನು ಪೋಲಿಸ್ ಠಾಣೆಗೆ ಸಲ್ಲಿಸಬೇಕಾಗಿತ್ತು. ಆದರೆ ಇದನ್ನು ಪಾಲಿಸದೇ ನಿಯಮ ಉಲ್ಲಂಘನೆ ಮಾಡಿದ್ದಾರೆ.
ಈ ನಿಯಮ ಮೀರಿ ವಿದೇಶಿ ಪ್ರಜೆಗಳಿಗೆ ತಂಗಲು ಅವಕಾಶ ನೀಡಿದ ಕುರಿತು ಗೋಕರ್ಣ ಪೊಲೀಸ ಠಾಣೆಯಲ್ಲಿ Immigration and Foreigners Act 2025 ಅಡಿ ಪ್ರಕರಣ ದಾಖಲಾಗಿದೆ.
ಪಿಎಸ್ಸೈ ಬಿ.ಎಮ್.ಅನಿಲ್ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
