Karwar| ಆಟದಲ್ಲಿ ಸೋಲು ಗೆಲುವು ಸಾಮಾನ್ಯ. ಪಡ್ತಿ ಸಮಾಜದ ಕ್ರಿಕೆಟ್ ಪಂದ್ಯಾವಳಿಯನ್ನು ಒಗ್ಗಟ್ಟಾಗಿ ಯಶಸ್ವಿಯಾಗಿ ಏರ್ಪಡಿಸಿರುವುದರಿಂದ ಇದು ಪಡ್ತಿ ಸಮಾಜದ ಗೆಲುವು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ಎಸ್.ನಾಯ್ಕ ಹೇಳಿದರು.

ತಾಲ್ಲೂಕಿನ ಪಡ್ತಿ ಸಮಾಜದ (ಪಿಪಿಎಲ್ ) ಪಡ್ತಿ ಸಮಾಜ ಪ್ರೀಮಿಯರ್‌ ಲೀಗ್‌‌ ಸೀಜನ್ 3 ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾರಿತೋಷಕ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡು ಬಹುಮಾನ ವಿತರಿಸಿ ಮಾತನಾಡಿದರು.

ಒಂದು ಸಮಾಜ ಒಗ್ಗಟ್ಟಾಗಿ ಈ ಪಂದ್ಯಾವಳಿಯನ್ನು ಯಶಸ್ವಿಯಾಗಿ ಸಂಘಟಿಸಿದೆ. ಇದು ಕಡವಾಡ ತಂಡ ಚಾಂಪಿಯನ್ ಆಗಿದೆ, ಹಿರೇಶಿಟ್ಟಾ ತಂಡ ದ್ವಿತೀಯ ಸ್ಥಾನ ಗಳಿಸಿದೆ ಎಂದು ನೋಡದೆ ಪಡ್ತಿ ಸಮಾಜದವರು ಒಂದಾಗಿ ಪಂದ್ಯಾವಳಿ ನಡೆಸಿರುವುದರಿಂದ ಪಡ್ತಿ ಸಮಾಜ ಗೆದ್ದಿದೆ ಎಂದು ಹೇಳಿದರು.ಯುವಕರು ಕ್ರೀಡೆಯ ಜೊತೆಗೆ ದೇಶಪ್ರೇಮ ಬೆಳೆಸಿಕೊಳ್ಳಬೇಕು ಹಾಗೂ ಸಮಾಜಸೇವೆಯಲ್ಲೂ ತೊಡಗಿಕೊಳ್ಳಬೇಕು ಎಂದು ರೂಪಾಲಿ ಎಸ್.ನಾಯ್ಕ ಕಿವಿಮಾತು ಹೇಳಿದರು.

ಪಂದ್ಯಾವಳಿಯಲ್ಲಿ ಪಾಲ್ಗೊಂಡ ಎಲ್ಲಾ ತಂಡಗಳು ಉತ್ತಮ ಪ್ರದರ್ಶನ ನೀಡಿದ್ದು ಪ್ರಥಮ ಬಹುಮಾನ ಚಾಂಪಿಯನ್ ಆಗಿ ಕಡವಾಡ ತಂಡ ಬಹುಮಾನ ಮುಡಿಗೇರಿಸಿಕೊಂಡಿತು.

ದ್ವೀತಿಯ ಬಹುಮಾನ ಹಿರೇಶಿಟ್ಟಾ ತಂಡ ಬಹುಮಾನ ಪಡೆದರೆ, ಚೆಂಡಿಯಾ ತಂಡ ತೃತೀಯ ಬಹುಮಾನ ತನ್ನದಾಗಿಸಿಕೊಂಡಿತು.

ಈ ಸಂದರ್ಭದಲ್ಲಿ ಪಡ್ತಿ ಸಮಾಜದ ಪಂದ್ಯಾವಳಿಯ ಸಮಿತಿಯ ಅಧ್ಯಕ್ಷ ಸತೀಶ್ ತಳೇಕರ, ಪ್ರಮುಖರಾದ ಸುಭಾಷ್ ಗುನಗಿ, ಸಂದೀಪ್ ತಳೇಕರ, ಗಿರೀಶ ಕೋಠಾರಕರ, ನರೇಶ್ ತಳೇಕರ, ಚಂದ್ರಕಾಂತ ಕೋಠಾರಕರ, ಪಡ್ತಿ ಸಮಾಜದ ಭಾಂದವರು, ಕ್ರೀಡಾ ಪಟುಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.