Karwar| ಕ್ರೀಡಾಪಟುಗಳು ಕ್ರೀಡೆಯಲ್ಲಿ ಸಕ್ರಿಯವಾಗಿ ಮುಂದೆ ಬಂದು ಉತ್ತಮ ಆಟವನ್ನು ಪ್ರದರ್ಶಿಸಿ ದೇಶದ ಪ್ರತಿನಿಧಿ ಆಗಬೇಕು ಎಂದು ಸೆಂಟ್ ಜೋಸೆಫ್ ಕಾಲೇಜ್ ಪ್ರಾಂಶುಪಾಲ ವಂದನೀಯ ಸ್ವಾಮಿ ಡಾ. ಸ್ಟೇನಿ ಪಿಂಟೋ ಹೇಳಿದರು.
ಅವರು ವಂದನಿಯ ದಿವಗಂತ ಬಿಷೋಪ್ ಡಾ. ವಿಲಿಯಂ ಡಿಮೆಲ್ಲೋ ಅವರ ಸ್ಮರಣಾರ್ಥ ಬೋಲ್ಡ್ ಅಂಡ್ ಡೈನಾಮಿಕ್ ಬಾಯ್ಸ್ ಇವರ ಸಂಯುಕ್ತ ಆಶ್ರಯದಲ್ಲಿ ಕಾರವಾರ ಸೂಪರ್ ಲೀಗ್ -2026 ಫುಟ್ಬಾಲ್ ಪಂದ್ಯಾವಳಿಯನ್ನು ಶನಿವಾರ ಮಾಲಾದೇವಿ ಮೈದಾನದಲ್ಲಿ ಉದ್ಘಾಟಿಸಿ ಮಾತನಾಡಿದರು.
ದಿ. ಬಿಶಪ್ ಡಾ. ವಿಲಿಯಂ ಡಿಮೆಲ್ಲೋ ನಾನು ಶಿಕ್ಷಣ ಪಡೆಯುತ್ತಿದಾಗ ನೀಡಿದ ಮಾರ್ಗದರ್ಶನವನ್ನು ನೆನಪಿಸಿಕೊಂಡ ಅವರು, ಉತ್ತಮ ಶಿಕ್ಷಣ ಪಡೆದು ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಾ ಇದ್ದೇನೆ ಎಂದರು. ಸುಮಾರು ಎರಡು ಸಾವಿರ ನಿರುದ್ಯೋಗ ಯುವಕರಿಗೆ ಹೊರದೇಶದಲ್ಲಿ ಕೆಲಸ ಕೊಟ್ಟು ಯುವಕರ ಜೀವನ ಪರಿವರ್ತನೆ ಮಾಡಿದಂತ ಮಹಾನ ವ್ಯಕ್ತಿ ಎಂದು ಬಣ್ಣಿಸಿದರು. ಎಷ್ಟೋ ಬಡವರಿಗೆ ನಿರ್ಗತಿಕರಿಗೆ ಜೀವನ ಕೊಟ್ಟು ದೇವರ ರೂಪದಲ್ಲಿ ಸಹಾಯ ಮಾಡಿದ್ದಾರೆ. ಅವರು ಮಾಡಿದ ಕಾರ್ಯಗಳು ಯಾರು ಮರೆಯಲು ಸಾಧ್ಯವಿಲ್ಲಾ ಎಂದರು.

ಇಫ್ಕ್ಕಾ (IFKA) ಸಂಸ್ಥೆಯ ಜಿಲ್ಲಾಧ್ಯಕ್ಷ ಸ್ಯಾಮ್ಸನ್ ಡಿಸೋಜಾ ಅವರು ಪಂದ್ಯಾವಳಿಯ ಉದ್ದೇಶ ಹಾಗೂ ದಿವಗಂತ ಬಿಷೋಪ್ ಡಾ ವಿಲಿಯಂ ಡಿಮೇಲ್ಲೋ ಅವರ ಆಶೀರ್ವಾದದಿಂದ ಹಸಿದವರಿಗೆ ಊಟ ನೀಡುತ್ತಾ ಬಂದಿದ್ದೇವೆ. ಇನ್ನು ತನಕ 8 ಲಕ್ಷ ಜನರಿಗೆ ಊಟ ನೀಡುತ್ತಾ ಬಂದಿದ್ದೇವೆ. ಯುವಕರು ಸಹ ಕ್ರೀಡೆಯ ಜೊತೆಗೆ ಇಂತಹ ಕಾರ್ಯಗಳಿಗೆ ಮುಂದೆ ಬರಬೇಕು ಎಂದು ಕ್ರೀಡಾಪಟುಗಳಿಗೆ ಶುಭಾಶಯ ಕೋರಿದರು.

ಈ ಫುಟ್ಬಾಲ್ ಪಂದ್ಯಾವಳಿಯ ಮುಖ್ಯ ಅತಿಥಿಯಾಗಿ ಉದ್ಯಮಿ ಪಿ. ವಿ. ಪ್ರಜಿತ್, ಉದ್ಯಮಿ ಹಾಗೂ ದಾನಿ ಸಂತೋಷ್ ಬೋರ್ಕರ್, ಕ್ಯಾಥಡ್ರಲ್ ದೇವಾಲಯದ ವಂದನೀಯ ಗುರುಗಳಾದ ಥೋಮಸ್ ಫರ್ನಾಂಡಿಸ್, ಗುರುಗಳಾದ ವಿಲ್ಸನ್ ಡಿಸೋಜಾ, ಕಾರವಾರ ಕ್ರಿಶ್ಚಿಯನ್ ಫೋರಂ ಅಧ್ಯಕ್ಷರಾದ ಲಿಯೋ ಲುವಿಸ್ ಕಮಿಟಿಯ ಅಧ್ಯಕ್ಷ ಅಕ್ವಿಂಲ್ ಫರ್ನಾಂಡಿಸ್, ಕಾರ್ಯದರ್ಶಿ ಅಂಥೋನ್ ಡಿಸೋಜಾ ಹಾಜರಿದ್ದರು.
ಈ ಸಂದರ್ಭದಲ್ಲಿ ಉದ್ಘಾಟಕರು ಹಾಗೂ ಗಣ್ಯ ವ್ಯಕ್ತಿಗಳು ಮೈದಾನದಲ್ಲಿ ಚೆಂಡಿನ ಮೇಲೆ ಸಹಿ ಮಾಡಿ ರಿಬ್ಬನ್ ಕತ್ತರಿಸಿ ಉದ್ಘಾಟನೆ ಮಾಡಿ ಎಲ್ಲಾ ತಂಡಗಳಿಗೆ ಶುಭಾಶಯ ಕೋರಿದರು.
ಕಾರವಾರ ಕ್ರಿಶ್ಚಿಯನ್ ಫೋರಂ ಅಧ್ಯಕ್ಷ ಲಿಯೋ ಲುವಿಸ್ ಗಣ್ಯ ವ್ಯಕ್ತಿಗಳನ್ನು ಸ್ವಾಗತಿಸಿದರು. ಕಮಿಟಿಯ ಅಧ್ಯಕ್ಷ ಅಕ್ವಿಂಲ್ ಫರ್ನಾಂಡಿಸ್ ಉದ್ಘಾಟನಾ ಕಾರ್ಯಕ್ರಮಕ್ಕೆ ಬಂದಂತಹ ಎಲ್ಲಾ ಗಣ್ಯರನ್ನು ವಂದಿಸಿದರು. ಕಾರ್ಯಕ್ರಮವನ್ನು ವಿಲ್ಸನ್ ಫರ್ನಾಂಡಿಸ್ ನೆರವೇರಿಸಿದರು.
