ಹಳಿಯಾಳ: ಉತ್ತರಕನ್ನಡ ಜಿಲ್ಲೆಯ ಹಳಿಯಾಳ – ಯಲ್ಲಾಪುರ ರಸ್ತೆಯ ಭಾಗವತಿ ಬಳಿ ಕಳೆದ ಕೆಲವು ದಿನಗಳಿಂದ ಒಂಟಿ ಸಲಗವೊಂದು ಕಾಣಿಸಿಕೊಳ್ಳುತ್ತಿದೆ. 

ಇಂದು ಬೆಳಗ್ಗೆ ಯಲ್ಲಾಪುರ ರಸ್ತೆಯ ಭಾಗವತಿ ಬಳಿ ನಡು ರಸ್ತೆಯಲ್ಲೇ ಒಂಟಿ ಸಲಗ ರಸ್ತೆಯ ಮೇಲೆ ಓಡಾಡಿದ್ದು, ರಸ್ತೆಗೆ ಅಡ್ಡಲಾಗಿ ನಿಂತು ಹಲವು ಹೊತ್ತುಗಳ ಕಾಲ ಸಂಚಾರವನ್ನೇ ಬ್ಲಾಕ್ ಮಾಡಿತ್ತು.‌ ಅಲ್ಲದೇ, ಆನೆಯ ಮುಂದೆ ವಾಹನಗಳು ಓಡಾಡೋವಾಗ ಅಟ್ಟಿಸಿಕೊಂಡು ಬಂದ ಘಟನೆಯೂ ನಡೆದಿದೆ. ಆನೆಯ ಈ ಪುಂಡಾಟವನ್ನು ವಾಹನ ಸವಾರರು ಮೊಬೈಲ್ ಕ್ಯಾಮೆರಾ ಮೂಲಕ ಸೆರೆ ಹಿಡಿದಿದ್ದಾರೆ. 

ನಡು ರಸ್ತೆಯಲ್ಲೇ ಒಂಟಿ ಸಲಗ ಇರೋವುದನ್ನು ಗಮನಿಸಿದ ಅದೇ ರಸ್ತೆಯಲ್ಲಿ ಬರುತ್ತಿದ್ದ ಸಾರಿಗೆ ಬಸ್ ಹಾಗೂ ಇತರ ವಾಹನಗಳು ದೂರದಲ್ಲಿ  ನಿಂತು ಆನೆ ರಸ್ತೆ ದಾಟಿ ಕಾಡಿನೊಳಗೆ ಹೋಗಲು ಅನುವು ಮಾಡಿ ಕೊಟ್ಟಿದ್ದಾರೆ‌. ಈ ರಸ್ತೆಯಲ್ಲಿ ಸಂಚರಿಸುವ ಸಂದರ್ಭ ಬಹಳ ಎಚ್ಚರಿಕೆಯಿಂದ ಪ್ರಯಾಣಿಸಲು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.