Karwar| ಅವಾಚ್ಯವಾಗಿ ಬೈದು ಬೆದರಿಕೆ ಹಾಕಿದ ಮೂವರ ಮೇಲೆ ಶಿರಸಿ ಗ್ರಾಮೀಣ ಪೋಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬಳು ದೂರು ದಾಖಲಿಸಿದ್ದಾರೆ.
ಶಿರಸಿಯ ಹುಲೇಕಲ್‌ನ ಹಂಚರಟಾದ ಅಬ್ದುಲಾ ಮುತಾಲಿಪ್ ಅಬ್ದುಲ್ ಮಜಿದ್ ಸಾಬ್, ಮುಸ್ತಾಕ್ ಅಬ್ದುಲ್ ಮಜಿದ್ ಸಾಬ್ ಹಾಗೂ ಅಬ್ದುಲ್ ಮಜಿದ್ ಸಾಬ್ ಮಹಿಳೆಗೆ ನಿಂಧಿಸಿದ ಮೂವರು ಅರೋಪಿಗಳು.
ಹುಲೇಕಲ್‌ನ ಆಶಾಬಿ ಅಬ್ದುಲ್ ರೆಹಮಾನ ಸಾಬ್ ಠಾಣೆಗೆ ನೀಡಿದ ದೂರಿನಂತೆ, ತನ್ನ ಅಳಿಯ ಅಬ್ದುಲಾ ರಶೀದ ಫಕೀರ ಸಾಬ್ ತಮ್ಮ ಮನೆಯ ಮುಂದಿನ ಗಟಾರದಲ್ಲಿ ನಿಂತಿದ್ದ ನೀರನ್ನು ಸ್ವಚ್ಚ ಮಾಡಿಸುತ್ತಿದ್ದಾಗ, ಪಕ್ಕದ ಮನೆಯವರು ಗಟಾರ ಮೇಲೆ ಮಣ್ಣು ಹಾಕಿದ್ದಾರೆ ಎಂದು ಹೇಳಿದ.
ಇದರಿಂದ ಸಿಟ್ಟಿಗೆದ್ದ ಮೂವರು ಆರೋಪಿಗಳು ರಸ್ತೆ ಮೇಲೆ ನಿಂತು ರಂ* ನಾವು ಮಣ್ಣು ಹಾಕಿದ್ದು ಎಂದು ಹೇಳುತ್ತಿಯಾ, ನಿನ್ನನು ಹೊಡೆದು ಆಸ್ಪತ್ರೆಗೆ ಸೇರುವಂತೆ ಮಾಡುತ್ತೇವೆ. ನಿನ್ನನ್ನು ಇಲ್ಲೆ ಕೊ*ದು ಹಾಕುತ್ತೇವೆ ಎಂದು ಹೇಳಿ ಬೆದರಿಕೆ ಹಾಕಿದ್ದಾರೆ ಎಂದು ಆಶಾಬಿ ದೂರು ದಾಖಲಿಸಿದ್ದಾರೆ.
ಅಸಂಜ್ಞೆಯ ಅಪರಾಧವಾಗಿದ್ದರಿಂದ, ಶಿರಸಿ ಗ್ರಾಮೀಣ ಠಾಣೆ ಪೋಲಿಸರು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
