Sirsi| ಮದುವೆ ದಿನವೇ ಮದುಮಗಳೊಬ್ಬಳು ತನ್ನ ಪ್ರಿಯಕರನೊಂದಿಗೆ ಪರಾರಿಯಾದ ಘಟನೆ ಶಿರಸಿಯಲ್ಲಿ ನಡೆದಿದೆ.
ಪರಾರಿಯಾದ ಮದುವೆ ವಧು ಇಲ್ಲಿನ ಮುಸ್ಲಿಂ ಗಲ್ಲಿಯ ಸಿಫಾ(25). ಈಕೆಗೆ ಎಂಬಿಬಿಎಸ್ ಕಲಿಯುತ್ತಿರುವ ಯುವಕನೊಂದಿಗೆ ಪ್ರೀತಿ, ಪ್ರಣಯ ಇತ್ತೆನ್ನಲಾಗಿದೆ. ಆದರೆ ಮಗಳ ಮದುವೆಗೆ ಪಾಲಕರ ವಿರೋಧವಿತ್ತು. ಅಲ್ಲದೇ ಪಾಲಕರಿಂದ ಯುವತಿಗೆ ತರಾತುರಿಯಲ್ಲಿ ಮದುವೆ ಸಹ ನಿಶ್ಚಯ ಮಾಡಲಾಗಿತ್ತು.
ಇಂದು ಶನಿವಾರ ಶಿರಸಿಯ ಉಸುರಿ ರಸ್ತೆಯಲ್ಲಿರುವ ಕಲ್ಯಾಣ ಮಂಟಪದಲ್ಲಿ ಮದುವೆ ನಡೆಯಬೇಕಿತ್ತು. ಆದರೆ ವಧು ಇಂದು ಬೆಳ್ಳಂಬೆಳಿಗ್ಗೆ ತಾನು ಪ್ರೀತಿಸುತ್ತಿದ್ದ ಎಂಬಿಬಿಎಸ್ ಕಲಿಯುತ್ತಿರುವ ಯುವಕನೊಂದಿಗೆ ಪರಾರಿಯಾಗಿದ್ದಾಳೆ.
ಮದುವೆ ಊಟಕ್ಕಾಗಿ ಮಾಡಿಸಿದ ಕ್ವಿಂಟಲ್ ಗಟ್ಟಲೆ ಮಟನ್ ಹಾಗೂ ಚಿಕನ್ ವೆಸ್ಟ್ ಆದಂತಾಗಿದೆ. ನಾಪತ್ತೆಯಾದ ಮಗಳನ್ನು ಹುಡುಕಿಕೊಡುವಂತೆ ಯುವತಿಯ ಸಿಫಾ ತಂದೆ ಝಹೀರ್ ಖಾನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
