Karwar| ಚರ್ಚ್ ನ ಹಣ ದುರುಪಯೋಗದ ದೂರು ದಾಖಲಿಸಿದವನ ಮೇಲೆಯೇ ಮನೆಗೆ ನುಗ್ಗಿ ಹಲ್ಲೆ ನಡೆಸಿದ ಘಟನೆ ಹಳಗಾದ ಚರ್ಚ್ ವಾಡಾದಲ್ಲಿ ನಡೆದಿದೆ.
ಸಮಾಜಸೇವಕ ಆಸಿಸ್ ಸಾವೇರ್ ಮಿನಿನ್ ಫರ್ನಾಂಡೀಸ್ (59) ಎಂಬುವವರೇ ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾದವರು.
ಇವರು ಹಲ್ಲೆ ಆರೋಪದ ಮೇಲೆ ಹಳಗಾದ ಫುಲ್ಲರ್ ಅಪೋಲಿನ್ ಫರ್ನಾಂಡೀಸ್, ಜೋಸೆಫ್ ಥಾಮಸ್ ಫರ್ನಾಂಡೀಸ್, ಎಂ.ಸಿ ಅಪೋಲಿನ್ ಫರ್ನಾಂಡೀಸ್, ಮಾರ್ಷಲ್ ಫರ್ನಾಂಡೀಸ್ ಫರ್ನಾಂಡೀಸ್, ರೋಮಿ ಅಪೋಲಿನ್ ಫರ್ನಾಂಡೀಸ್ ಹಾಗೂ ರಿಂಕೊ ಫುಲರ್ ಫರ್ನಾಂಡೀಸ್ ಸೇರಿದಂತೆ ಆರು ಜನರ ಮೇಲೆ ದೂರು ದಾಖಲಿಸಿದ್ದಾರೆ.
ಹಳಗಾದ ಚರ್ಚನ ಹಣ ದುರುಪಯೋಗವಾಗಿದೆ ಎಂದು ಆರೋಪಿಸಿ ಆಸಿಸ್ ಫರ್ನಾಂಡೀಸ್ ಲೋಕಾಯುಕ್ತದಲ್ಲಿ ದೂರು ಸಲ್ಲಿಸಿದ್ದರು. ಆ ದೂರನ್ನು ಹಿಂದಕ್ಕೆ ಪಡೆಯುವಂತೆ ಆರೋಪಿಗಳು ಗುಂಪು ಕಟ್ಟಿಕೊಂಡು ಆಸೀಸ್ ಫರ್ನಾಂಡೀಸ್ ಮನೆಗೆ ಬಂದು ಬಲವಂತ ಮಾಡಿದ್ದಾರೆ. ದೂರು ಹಿಂಪಡೆಯಲು ಒಪ್ಪದ ಆಸೀಸ್ ಫರ್ನಾಂಡೀಸ್ ಅವರನ್ನು ಎಳೆದಾಡಿ ಕಾಲಿನಿಂದ ಒದ್ದು, ಅವಾಚ್ಯ ಶಬ್ದದಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿದ ರಭಸಕ್ಕೆ ಕನ್ನಡಕ ಒಡೆದು ಚೂರಾಗಿದೆ. ಗಾಯಗೊಂಡ ಆಸಿಸ್ ಫರ್ನಾಂಡೀಸ್ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.
ಘಟನೆಯ ಬಗ್ಗೆ ಆಸೀಸ್ ಫರ್ನಾಂಡೀಸ್ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೋಲಿಸರು ತನಿಖೆ ಕೈಗೊಂಡಿದ್ದಾರೆ.
