Karwar| ದಗಲಬಾಜಿತನ ಜಿಲ್ಲಾ ಉಸ್ತುವಾರಿ ‌ಸಚಿವ ಮಂಕಾಳ ವೈದ್ಯ ಅವರ ರಾಜಕೀಯ ಜೀವನದಲ್ಲಿ ಹಾಸು ಹೊಕ್ಕಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಮಾಸ್ತಪ್ಪ ನಾಯ್ಕ ಟೀಕಿಸಿ, ಉದಾಹರಣೆ ಸಮೇತ ವೈದ್ಯರ ಒಂದೊಂದೆ ದಗಲಬಾಜಿತನ ಮಾಧ್ಯಮದ ಎದುರು ಇಟ್ಟರು.

ಕಾರವಾರದ ಪತ್ರಿಕಾ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಚಿವ ವೈದ್ಯರ ದಗಲಬಾಜಿತನವನ್ನು ಎಳೆ ಎಳೆಯಾಗಿ ‌ಬಿಚ್ಚಿಟ್ಟರು.

ಸಚಿವರು ತನ್ನ ಮಗಳು ಬೀನಾ ವೈದ್ಯಳನ್ನು ಭಟ್ಕಳದ ಪ್ರತಿಷ್ಠಿತ ಅರ್ಭನ್ ಬ್ಯಾಂಕ್ ಗೆ ವಾಮ ಮಾರ್ಗದಲ್ಲಿ ನಿರ್ದೇಶಕಿಯನ್ನಾಗಿ ಮಾಡಿದ್ದಾರೆ ಎಂದು ಆರೋಪಿಸಿದ ಅವರು, ಸತ್ತವರ ಹೆಸರಿನಲ್ಲಿದ್ದ ಶೇರ್ ಪಡೆದು ಮಗಳನ್ನು ನಿರ್ದೇಶಕಿಯನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿಸಿದ್ದಾರೆ ಎಂದು ಆರೋಪಿಸಿದರು.

ಇನ್ನು ಹೊನ್ನಾವರದ ಟೊಂಕದಲ್ಲಿ ಯಾವ ಕಾರಣಕ್ಕೂ ಬಂದರು ಮಾಡಲು ಬಿಡಲ್ಲ ಎಂದು ಚುನಾವಣೆಯ ಸಂದರ್ಭದಲ್ಲಿ ಹೇಳಿದ್ದರು. ಆ ಸಮಯದಲ್ಲಿ ಆಗ ಕೆಪಿಸಿಸಿ ಅಧ್ಯಕ್ಷ ಡಿಕೆಶಿಯನ್ನೂ ಸಹ ಕರೆಸಿ ಈ ಯೋಜನೆ ಯಾವುದೇ ಕಾರಣಕ್ಕೂ ಆಗಲು ಬಿಡಲ್ಲ ಎಂದು ನಂತರ ಸರ್ಕಾರ ಅಧಿಕಾರಕ್ಕೆ‌ ಬಂದ ನಂತರ ಅಮಾಯಕರ ಗುಡಿಸಲುಗಳನ್ನು ತೆರವು ಮಾಡಿಸಿದ್ದಿರಿ. ಅಮಾಯಕ ಜನ ಈಗಲೂ ಕೊರ್ಟಾ ಅಲೆದಾಡುವಂತೆ ಮಾಡಿದ್ದು ನಿಮ್ಮ ದಗಲಬಾಜಿತನ ಅಲ್ವೇ‌ ಎಂದು ಪ್ರಶ್ನಿಸಿದರು.

ಇನ್ನು ಕಳೆದ ಚುನಾವಣೆಯ ಸಂದರ್ಭದಲ್ಲಿ ನಕಲಿ ಸೋಶಿಯಲ್ ಮೀಡಿಯಾ ಖಾತೆ ನಿರ್ವಹಿಸುತ್ತಿದ್ದ ವ್ಯಕ್ತಿಯನ್ನು ನಿಮ್ಮ ಮನೆಯಲ್ಲೇ ಇಟ್ಟು ಸಾಕಿ ನಂತರ ಈ ಅಮಾಯಕ ಹೆಣ್ಣಮಕ್ಕಳ ತೆಜೋವಧೆ ಮಾಡಿದ ಆತನನ್ನು ಭಟ್ಕಳದ ಪ್ರತಿಷ್ಠಿತ ಜನತಾ ಕೋ ಆಪ್ ರೇಟಿವ್ ಬ್ಯಾಂಕ್ ನಲ್ಲಿ ಉದ್ಯೋಗ ಕೊಡಿಸಿದ್ದು ನಿಮ್ಮ ರಾಜಕೀಯ ದಗಲಬಾಜಿತನಕ್ಕೆ ಸಾಕ್ಷಿ ಎಂದು ಮಾಸ್ತಪ್ಪ ನಾಯ್ಕ ಟೀಕಿಸಿದರು.

ಪತ್ರಿಕಾಗೋಷ್ಠಿಯಲ್ಲಿ ನವೀನ್, ಕೃಷ್ಷನಾಯ್ಕ, ಅಶೋಕ, ವೆಂಕಟೇಶ, ನಾಗರಾಜ ನಾಯ್ಕ, ಮಂಜು ಹಿನ್ನೂರು
ರವಿ ಹೊನ್ನಾವರ, ಚೇತನ ನಾಯ್ಕ, ವಸಂತ ನಾಯ್ಕ ಸೇರಿದಂತೆ ಹಲವರು ಇದ್ದರು.