ಕಾರವಾರ: ಅಳ್ನಾವರ – ದಾಂಡೇಲಿ ನಡುವೆ ಹೊಸ ಡೆಮು ರೈಲಿನ ಸೇವೆಯನ್ನು ರೈಲ್ವೆ ರಾಜ್ಯ ಸಚಿವ ಸೋಮಣ್ಣ ಅವರು ಫೆಬ್ರವರಿ 7 ರಂದು ಸಂಜೆ 4 ಗಂಟೆಗೆ ದಾಂಡೇಲಿ ರೈಲು ನಿಲ್ದಾಣದಲ್ಲಿ ಉದ್ಘಾಟಿಸಲಿದ್ದಾರೆ.

ಈ ಡೆಮು ರೈಲು ಸೇವೆಗಳು ಫೆಬ್ರವರಿ 9 ರಿಂದ ಕಾರ್ಯಾಚರಣೆ ಕೈಗೊಳ್ಳಲಿದೆ.

ಅಳ್ನಾವರ್ ಜಂಕ್ಷನ್ ↔ ದಾಂಡೇಲಿ ↔ ಅಳ್ನಾವರ್ ಜಂಕ್ಷನ್ ಮಾರ್ಗದಲ್ಲಿ, ಅಳ್ನಾವರ್ ಜಂಕ್ಷನ್‌ ನಿಂದ ದಾಂಡೇಲಿಗೆ ರೈಲು ಸಂಖ್ಯೆ 76501: ಬೆಳಿಗ್ಗೆ 05:30ಕ್ಕೆ ಅಳ್ನಾವರ್ ಜಂಕ್ಷನ್‌ ನಿಂದ ಹೊರಟು, ಬೆಳಿಗ್ಗೆ 06:15ಕ್ಕೆ ದಾಂಡೇಲಿ ತಲುಪಲಿದೆ.

ರೈಲು ಸಂಖ್ಯೆ 76503: ಬೆಳಿಗ್ಗೆ 07:40ಕ್ಕೆ ಅಳ್ನಾವರ್ ಜಂಕ್ಷನ್‌ ನಿಂದ ಹೊರಟು, ಬೆಳಿಗ್ಗೆ 08:25ಕ್ಕೆ ದಾಂಡೇಲಿ ತಲುಪುತ್ತದೆ.

ರೈಲು ಸಂಖ್ಯೆ. 76505: ಸಂಜೆ 07:30ಕ್ಕೆ ಅಳ್ನಾವರ್ ಜಂಕ್ಷನ್‌ ನಿಂದ ಹೊರಟು, ಸಂಜೆ 08:15ಕ್ಕೆ ದಾಂಡೇಲಿ ತಲುಪುತ್ತದೆ.

ದಾಂಡೇಲಿಯಿಂದ ಅಳ್ನಾವರ್ ಜಂಕ್ಷನ್‌ಗೆ ರೈಲು ಸಂಖ್ಯೆ 76502: ಬೆಳಿಗ್ಗೆ 06:45ಕ್ಕೆ ದಾಂಡೇಲಿಯಿಂದ ಹೊರಟು, ಬೆಳಿಗ್ಗೆ 07:30ಕ್ಕೆ ಅಳ್ನಾವರ್ ಜಂಕ್ಷನ್ ತಲುಪುತ್ತದೆ.

ರೈಲು ಸಂಖ್ಯೆ 76504: ಬೆಳಿಗ್ಗೆ 08:40ಕ್ಕೆ ದಾಂಡೇಲಿಯಿಂದ ಹೊರಟು, ಬೆಳಿಗ್ಗೆ 09:25ಕ್ಕೆ ಅಳ್ನಾವರ್ ಜಂಕ್ಷನ್ ತಲುಪುತ್ತದೆ.

ರೈಲು ಸಂಖ್ಯೆ. 76506: ಸಂಜೆ 08:30ಕ್ಕೆ ದಾಂಡೇಲಿಯಿಂದ ಹೊರಟು, ಸಂಜೆ 09:15ಕ್ಕೆ ಅಳ್ನಾವರ್ ಜಂಕ್ಷನ್ ತಲುಪುತ್ತದೆ.

4 ಬೋಗಿಗಳ DEMU (2 ಚಾಲನಾ ಪವರ್ ಕಾರುಗಳು + 02 ಟ್ರೇಲರ್ ಕಾರುಗಳು) ವಾರಕ್ಕೆ 6 ದಿನಗಳು (ಭಾನುವಾರ ಹೊರತುಪಡಿಸಿ) ಸಂಚರಿಸಲಿದೆ ಎಂದು ನೈಋತ್ಯ ರೈಲ್ವೆ, ಹುಬ್ಬಳ್ಳಿಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ್ ಕನಮಡಿ ತಿಳಿಸಿದ್ದಾರೆ.