Karwar| ಬೀದಿ ಬದಿ ವ್ಯಾಪಾರಿಗಳಿಂದ ಶುಲ್ಕ ಸಂಗ್ರಹಿಸಲು ಗುತ್ತಿಗೆ ಪಡೆದವರು ಮನಬಂದಂತೆ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪ ಬೀದಿಬದಿ ವ್ಯಾಪಾರಿಗಳಿಂದ ಕೇಳಿಬಂದಿದೆ.
ವ್ಯಾಪಾರಿಗಳ ಹೇಳಿಕೆಯಂತೆ, ಒಬ್ಬೊಬ್ಬರಿಂದ ₹300 ರಿಂದ ₹400ರವರೆಗೆ ಬಲವಂತವಾಗಿ ಹಣ ಸಂಗ್ರಹಿಸಲಾಗುತ್ತಿದೆ. ತಾವು ಹೇಳಿದ ಹಣ ನೀಡದಿದ್ದರೆ ಬೀದಿ ಬದಿಯ ಅಂಗಡಿ ತೆಗೆಯುವಂತೆ ಬೆದರಿಕೆ ಹಾಕುತ್ತಾರೆ ಎಂದು ವ್ಯಾಪಾರಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ. ಇನ್ನು ಗುತ್ತಿಗೆದಾರರು ನೀಡುವ ರಶೀದಿಗಳಲ್ಲಿ ₹50 ಎಂದು ನಮೂದಿಸಿರುವ ಐದಾರು ಚೀಟಿಗಳನ್ನು ನೀಡಿ, ಅದಕ್ಕಿಂತ ಹೆಚ್ಚಿನ ಮೊತ್ತವನ್ನು ವಸೂಲಿ ಮಾಡಲಾಗುತ್ತಿದೆ ಎಂದು ವ್ಯಾಪಾರಿಗಳು ದೂರಿದ್ದಾರೆ.
ರಶೀದಿಯಲ್ಲಿ ನಮೂದಿಸಿರುವ ಮೊತ್ತಕ್ಕಿಂತ ಹೆಚ್ಚು ಹಣ ಪಡೆಯುತ್ತಿರುವುದರಿಂದ ವ್ಯಾಪಾರಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.
ಈ ಕುರಿತು ಕಾರವಾರ ನಗರಸಭೆ ಆಯುಕ್ತರು ಮಧ್ಯಪ್ರವೇಶಿಸಿ, ಗುತ್ತಿಗೆದಾರರ ಈ ರೀತಿಯ ಅಕ್ರಮ ವಸೂಲಿ ಹಾಗೂ ಹಗಲು ದರೋಡೆಗೆ ಕಡಿವಾಣ ಹಾಕಿ, ಬೀದಿ ಬದಿ ವ್ಯಾಪಾರಿಗಳಿಗೆ ನ್ಯಾಯ ಒದಗಿಸಬೇಕು ಎಂದು ವ್ಯಾಪಾರಿಗಳು ಒತ್ತಾಯಿಸಿದ್ದಾರೆ.
