ಕಾರವಾರದ ನಡುಗಡ್ಡೆ ಅಂಜುದೀಪ್ ಹೆಸರಿನ ಯುದ್ದನೌಕೆ|
ಭಾರತೀಯ ನೌಕಾಪಡೆ ತನ್ನ ಕರಾವಳಿ ಭದ್ರತೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದು, ಇಂದು ಶುಕ್ರವಾರ ಹೊಸ ಯುದ್ಧನೌಕೆ INS ಅಂಜದೀಪ್ ಅನ್ನು ಅಧಿಕೃತವಾಗಿ ಸೇರ್ಪಡೆಗೊಳಿಸಿದೆ.
ಉತ್ತರಕನ್ನಡ ಜಿಲ್ಲೆಯ ಕರಾವಳಿ ನಗರ ಕಾರವಾರದ ‘ಅಂಜುದೀಪ್’ ದ್ವೀಪದ (Anjadip Island) ಹೆಸರನ್ನು ಈ INS ಅಂಜದೀಪ್ ಗೆ ಇಡಲಾಗಿರುವುದು ಒಂದು ವಿಶೇಷವಾಗಿದೆ.
Indian Navyಗೆ ಸೇರಿಸಲಾದ ಈ ಯುದ್ಧನೌಕೆಯನ್ನು ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ ತ್ರಿಪಾಠಿ
ಅವರು ಚೆನ್ನೈ ಬಂದರುನಲ್ಲಿ ನಡೆದ ಸಮಾರಂಭದಲ್ಲಿ ಲೋಕಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಹಿರಿಯ ನೌಕಾಪಡೆ ಅಧಿಕಾರಿಗಳು ಹಾಗೂ ಸರ್ಕಾರದ ಗಣ್ಯರು ಉಪಸ್ಥಿತರಿದ್ದರು.

ಡಾಲ್ಫಿನ್ ಹಂಟರ್ – ಸಬ್ಮೆರಿನ್ ಪತ್ತೆಗಾಗಿ ವಿಶೇಷ ವಿನ್ಯಾಸ
77 ಮೀಟರ್ ಉದ್ದದ ಈ ನೌಕೆ, ನೌಕಾಪಡೆಯ ಆ್ಯಂಟಿ-ಸಬ್ಮೆರಿನ್ ವಾರ್ಫೇರ್ ಶ್ಯಾಲೋ ವಾಟರ್ ಕ್ರಾಫ್ಟ್ (ASW-SWC) ಯೋಜನೆಯಡಿ ನಿರ್ಮಿಸಲಾಗುತ್ತಿರುವ ಎಂಟು ನೌಕೆಗಳ ಪೈಕಿ ಮೂರನೆಯದು. “ಡಾಲ್ಫಿನ್ ಹಂಟರ್” ಎಂದೇ ಪರಿಚಿತವಾಗಿರುವ ಈ ನೌಕೆ, ಕರಾವಳಿ ಹಾಗೂ ಅಲ್ಪಆಳದ ಸಮುದ್ರ ಪ್ರದೇಶಗಳಲ್ಲಿ ಶತ್ರು ಜಲಾಂತರ್ಗಾಮಿ ನೌಕೆಗಳನ್ನು (Submarines) ಪತ್ತೆಹಚ್ಚಿ, ಹಿಂಬಾಲಿಸಿ, ನಿಷ್ಕ್ರಿಯಗೊಳಿಸಲು ವಿನ್ಯಾಸಗೊಳಿಸಲಾಗಿದೆ.
INS ಅಂಜದೀಪ್ನಲ್ಲಿ ಸ್ವದೇಶಿ ತಂತ್ರಜ್ಞಾನ ಆಧಾರಿತ ಅತ್ಯಾಧುನಿಕ ASW ಶಸ್ತ್ರಾಸ್ತ್ರ ಮತ್ತು ಸೆನ್ಸಾರ್ ಪ್ಯಾಕೇಜ್ ಅಳವಡಿಸಲಾಗಿದೆ. ಇದರಲ್ಲಿ: ಹಲ್-ಮೌಂಟೆಡ್ ‘ಅಭಯ’ ಸೋನಾರ್ ವ್ಯವಸ್ಥೆ ಲೈಟ್ವೇಟ್ ಟಾರ್ಪಿಡೋಗಳು
ASW ರಾಕೆಟ್ ವ್ಯವಸ್ಥೆ ಇದಲ್ಲದೆ ಕರಾವಳಿ ಮೇಲ್ವಿಚಾರಣೆ, ಕಡಿಮೆ ತೀವ್ರತೆಯ ಸಮುದ್ರ ಕಾರ್ಯಾಚರಣೆಗಳು ಮತ್ತು ಶೋಧ–ರಕ್ಷಣೆ (Search & Rescue) ಕಾರ್ಯಗಳನ್ನು ನಿರ್ವಹಿಸುವ ಸಾಮರ್ಥ್ಯವೂ ಈ ನೌಕೆಗೆ ಇದೆ.
ಹೈ-ಸ್ಪೀಡ್ ವಾಟರ್-ಜೆಟ್ ಪ್ರೊಪಲ್ಷನ್ ವ್ಯವಸ್ಥೆ ಹೊಂದಿರುವ ಈ ನೌಕೆ 25 ನಾಟ್ಸ್ ವೇಗ ತಲುಪಬಲ್ಲದು. ಇದರಿಂದ ಕರಾವಳಿ ಹಾಗೂ ಅಲ್ಪಆಳದ ಸಮುದ್ರ ಪ್ರದೇಶಗಳಲ್ಲಿ ತ್ವರಿತ ಕಾರ್ಯಾಚರಣೆ ನಡೆಸಲು ಸಾಧ್ಯವಾಗುತ್ತದೆ. ಇಂತಹ ಪ್ರದೇಶಗಳು ಭಾರತದ ಸಮುದ್ರ ಭದ್ರತೆಯಲ್ಲಿ ಅತ್ಯಂತ ಮಹತ್ವದ್ದಾಗಿವೆ.
ಕೊಲ್ಕತ್ತಾದಲ್ಲಿ ನಿರ್ಮಾಣ ಈ ನೌಕೆಯನ್ನು Garden Reach Shipbuilders and Engineers ಸಂಸ್ಥೆ, Kolkataನಲ್ಲಿ ನಿರ್ಮಿಸಿದೆ. ಕರಾವಳಿ ರಕ್ಷಣಾ ಕಾರ್ಯಾಚರಣೆಗಳು ಹಾಗೂ ಅರಬ್ಬೀ ಸಮುದ್ರದ ಪ್ರಮುಖ ಸಾಗಣೆ ಮಾರ್ಗಗಳ ಭದ್ರತೆಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.
INS ಈ ಸೇರ್ಪಡೆ ಮೂಲಕ ಕರ್ನಾಟಕ ಸೇರಿದಂತೆ ದೇಶದ ವಿಶಾಲ ಕರಾವಳಿ ಪ್ರದೇಶಗಳ ಭದ್ರತೆ ಮತ್ತಷ್ಟು ಬಲವಾಗಲಿದೆ. ಸಮುದ್ರ ಭದ್ರತೆಯಲ್ಲಿ ಮತ್ತೊಂದು ಬಲಿಷ್ಠ ಹೆಜ್ಜೆ. ಪ್ರಾದೇಶಿಕ ಸಮುದ್ರ ಉದ್ವಿಗ್ನತೆಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ, ಕರಾವಳಿ ಪ್ರದೇಶಗಳ ತಂತ್ರಾತ್ಮಕ ಮಹತ್ವವೂ ಹೆಚ್ಚುತ್ತಿದೆ. ಈ ಹಿನ್ನೆಲೆ ಭಾರತೀಯ ನೌಕಾಪಡೆಯ ಆಧುನೀಕರಣ ಯೋಜನೆಯ ಭಾಗವಾಗಿ INS ಅಂಜದೀಪ್ ಸೇರ್ಪಡೆ ಮಹತ್ವದ ಬೆಳವಣಿಗೆಯಾಗಿದೆ.
ತಜ್ಞರ ಪ್ರಕಾರ, ಇಂತಹ ಶ್ಯಾಲೋ-ವಾಟರ್ ASW ನೌಕೆಗಳು ಕರಾವಳಿಯ ಸಮೀಪ ಜಲಾಂತರ್ಗಾಮಿ ಚಟುವಟಿಕೆಗಳ ಮೇಲ್ವಿಚಾರಣೆಯನ್ನು ಬಲಪಡಿಸಿ, ಸಂಭವನೀಯ ಅಪಾಯಗಳಿಗೆ ತ್ವರಿತ ಪ್ರತಿಕ್ರಿಯೆ ನೀಡುವಲ್ಲಿ ನೆರವಾಗಲಿವೆ.
