Six pythons spotted in house premises at once: Locals worried|Karwar| ಆರು ಹೆಬ್ಬಾವುಗಳು ಮನೆಯೊಂದರ ಆವರಣದಲ್ಲಿ ಏಕಕಾಲದಲ್ಲಿ ಕಾಣಿಸಿಕೊಂಡು, ಜನತೆಯಲ್ಲಿ ಆತಂಕ ಮೂಡಿಸಿದ ಘಟನೆ ಕಾರವಾರದ ಕಠಿಣಕೋಣದಲ್ಲಿ ನಡೆದಿದೆ.

ವಿಜಯ ತಳೇಕರ ಎಂಬವರ ಮನೆಯ ಆವರಣದಲ್ಲಿ ಆರು ಹೆಬ್ಬಾವು ಕಾಣಿಸಿಕೊಂಡಿದೆ. ಅವರ ಮನೆಯ ಆವರಣದಲ್ಲಿ ದಾಸ್ತಾನಿಟ್ಟಿದ್ದ ಕಬ್ಬಿಣದ ಸಾಮಗ್ರಿಗಳ ನಡುವೆ ಹೆಬ್ಬಾವುಗಳು ಪತ್ತೆಯಾಗಿದೆ.
ಆತಂಕಗೊಂಡ ಸ್ಥಳೀಯರು ಉರಗ ರಕ್ಷಣೆ ಮಾಡುವ ಅರಣ್ಯ ಇಲಾಖೆಯ ಗಸ್ತು ವನಪಾಲಕ ಗೋಪಾಲ ನಾಯ್ಕ ಹಾಗೂ ವನಪಾಲಕ ರಾಜೇಶ ನಾಯ್ಕ ಅವರಿಗೆ ಕರೆಮಾಡಿ ಕರೆಯಿಸಿದ್ದಾರೆ.
ಕೂಡಲೇ ಸ್ಥಳಕ್ಕೆ ಬಂದ ವನಪಾಲಕರು, ಹೆಬ್ಬಾವುಗಳನ್ನು ಸುರಕ್ಷಿತವಾಗಿ ಸೆರೆಹಿಡಿದಿದ್ದಾರೆ.

ಪ್ರಸ್ತುತ ಹಾವಿನ ಮಿಲನ ಸಮಯವಾದ್ದರಿಂದ ಆರು ಹೆಬ್ಬಾವುಗಳು ಕಾಣಸಿಕ್ಕಿವೆ. ಹೆಬ್ಬಾವು ಮನುಷ್ಯರ ಮೇಲೆ ಯಾವುದೇ ರೀತಿ ಹಾನಿಯುಂಟು ಮಾಡಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ಹೆಬ್ಬಾವುಗಳು ಸುಮಾರು 8ರಿಂದ 12 ಅಡಿ ಉದ್ದ ಇದ್ದವು. ಹಾವುಗಳನ್ನು ಸುರಕ್ಷಿತವಾಗಿ ಹಿಡಿದ ವನಪಾಲಕರು ಅವುಗಳನ್ನು ಅರಣ್ಯಕ್ಕೆ ಬಿಟ್ಟಿದ್ದಾರೆ.
