Gram One|Franchise|ಉತ್ತರಕನ್ನಡ ಜಿಲ್ಲೆಯ ಆರು ನಗರಸ್ಥಳೀಯ ಸಂಸ್ಥೆಗಳಲ್ಲಿ ಗ್ರಾಮ ಒನ್ ಕೇಂದ್ರ ಸ್ಥಾಪನೆಗಾಗಿ ಪ್ರಾಂಚೈಸಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲೆಯ ಭಟ್ಕಳ ಪುರಸಭೆ, ದಾಂಡೇಲಿ ನಗರಸಭೆ, ಹಳಿಯಾಳ ಪುರಸಭೆ, ಕಾರವಾರ ನಗರಸಭೆ, ಮಂಕಿ ಪಟ್ಟಣ ಪಂಚಾಯತ, ಶಿರಸಿ ನಗರಸಭೆ ಸೇರಿದಂತೆ 6 ನಗರಸ್ಥಳೀಯ ಸಂಸ್ಥೆಗಳಲ್ಲಿ ಹೊಸದಾಗಿ 10 ಗ್ರಾಮ ಒನ್ ಕೇಂದ್ರ ಅನುಷ್ಠಾನಗೊಳ್ಳುವುದು ಅವಶ್ಯಕತೆ ಇದ್ದು, ಸ್ಥಳೀಯ ನಗರ ಸಂಸ್ಥೆಗಳಲ್ಲಿ ಸಮಗ್ರ ನಾಗರಿಕ ಸೇವಾ ಕೇಂದ್ರ ಗ್ರಾಮ ಒನ್ ಆರಂಭಿಸಲು ಉದ್ದೇಶಿಸಿಸಲಾಗಿದೆ.
ಆಸಕ್ತರು ವೆಬ್ಸೈಟ್: https://www.karnatakaone.gov.in/Public/FranchiseeTerms ಮೂಲಕ ಮಾರ್ಚ 2 ರೊಳಗಾಗಿ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ತಹಶೀಲ್ದಾರ ಕಚೇರಿಯನ್ನು ಸಂಪರ್ಕಿಸುವಂತೆ ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನು ಓದಿ: ರುಂಡ ಇಲ್ಲದ ಮಹಿಳೆ ದೇಹ ಪತ್ತೆ
