ಕಾರವಾರ: ಜನವರಿ 9 ರಂದು ಕದ್ರಾದ ಯುವತಿ ರಿಶೆಲ್ ಡಿಸೋಜಾ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿತನಾಗಿದ್ದ ಚಿರಾಗ್ ಕೊಠಾರಕರ ನನ್ನು ಫೆ.10ರ ತನಕ ನ್ಯಾಯಾಂಗ ಬಂಧನದಲ್ಲಿಡಲು ನ್ಯಾಯಾಲಯ ಸೂಚಿಸಿದೆ.
ಪೊಲೀಸ್ ಕಸ್ಟಡಿ ನಿನ್ನೆ ಅವಧಿ ಮುಗಿದ ಹಿನ್ನೆಲೆಯಲ್ಲಿ ಪೊಲೀಸರು ನ್ಯಾಯಾಧೀಶರ ಎದುರು ಚಿರಾಗನನ್ನು ಹಾಜರುಪಡಿಸಿದ್ದರು.
ಜ.30 ರಂದು ಚೆನ್ನೈ ನಲ್ಲಿ ಚಿರಾಗ್ ಕೋಠಾರಕರ್ ನನ್ನು ಬಂಧಿಸಿದ್ದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗೆ 9 ದಿನಗಳ ಕಾಲ ಪೊಲೀಸ್ ವಶಕ್ಕೆ ಪಡೆದಿದ್ದರು.
ಚಿರಾಗ್ ಪರ ವಕೀಲರು ಜಾಮೀನಿಗಾಗಿ ಸಿಜೆಎಂ ನ್ಯಾಯಾಲಯದಲ್ಲಿ ವಾದಿಸಿದ್ದು , ಸರ್ಕಾರದ ಪರ ಪಿಪಿ ತನುಜಾ ವಾದಿಸಿದ್ದಾರೆ.
ಜಾಮೀನು ಸಂಬಂಧದ ನಿರ್ಣಯವನ್ನು ನ್ಯಾಯಾಲಯ ಫೆ.10 ರಂದು ನೀಡಲಿದೆ.
