ಮುಂಡಗೋಡ: ಸಾಲಬಾಧೆ ಮತ್ತು ಬರ ಆತಂಕದಿಂದ ರೈತನೋರ್ವ ಗದ್ದೆಯಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮುಂಡಗೋಡ ತಾಲೂಕಿನ ಹುನಗುಂದ ಗ್ರಾಮದಲ್ಲಿ ನಡೆದಿದೆ.

ಹುನಗುಂದ ಗ್ರಾಮದ ಫಕೀರಗೌಡ ಬಸನಗೌಡ ಪಾಟೀಲ್‌ (42) ಎಂಬಾತನೇ ಆತ್ಮಹತ್ಯೆ ಮಾಡಿಕೊಂಡ ರೈತ ಎಂದು ಗುರುತಿಸಲಾಗಿದೆ. ಬ್ಯಾಂಕ್‌ ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ. ವಿಫರಿತವಾದ ಸಾಲದ ಹೊರೆ ಹಾಗೂ ಬರದ ಆತಂಕದ ಹಿನ್ನಲೆಯಲ್ಲಿ ತೀವ್ರ ಒತ್ತಡಕೊಳಗಾಗಿದ್ದ ಎನ್ನಲಾಗಿದೆ.

ಸೋಮವಾರ ರಾತ್ರಿ ಹೊಲಕ್ಕೆ ತೆರಳಿದ್ದ ರೈತ ಫಕೀರಗೌಡ ವಾಪಸ್‌ ಮನೆಗೆ ಬಂದಿರಲಿಲ್ಲ. ಬೆಳಗ್ಗೆ ಕುಟುಂಬಸ್ಥರು ಹುಡುಕಾಟ ನಡೆಸಿದಾಗ ಹೊಲದಲ್ಲೇ ವಿಷ ಸೇವಿಸಿ ಮೃತಪಟ್ಟ ಸ್ಥಿತಿಯಲ್ಲಿ ರೈತನ ಮೃತದೇಹ ಪತ್ತೆಯಾಗಿದೆ. ಪೋಲಿಸರು ಸ್ಥಳಕ್ಕೆ ತೆರಳಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.