ಕಾರವಾರ: ಮುಂಬೈಯ Chhatrapati Shivaji Maharaj Terminus (CSMT) ನಿಲ್ದಾಣದಲ್ಲಿ ನಡೆಯುತ್ತಿರುವ ವೇದಿಕೆ (ಪ್ಲಾಟ್‌ಫಾರ್ಮ್) ವಿಸ್ತರಣೆ ಕಾಮಗಾರಿ ಹಿನ್ನೆಲೆಯಲ್ಲಿ ಜುಲೈ 31ರವರೆಗೆ ಕೆಲವು ರೈಲುಗಳ ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆ ಮಾಡಲಾಗಿದೆ ಎಂದು ಮಧ್ಯ ರೈಲ್ವೆ ಪ್ರಕಟಿಸಿದೆ.
ಪ್ರಕಟಣೆಯ ಪ್ರಕಾರ, ರೈಲು ಸಂಖ್ಯೆ 22120 ಮಡಗಾಂವ್
ಜಂಕ್ಷನ್–ಮುಂಬೈ CSMT ತೇಜಸ್ ಎಕ್ಸ್‌ಪ್ರೆಸ್ ಜುಲೈ 29ರವರೆಗೆ ದಾದರ್ ನಿಲ್ದಾಣದಲ್ಲೇ ತನ್ನ ಪ್ರಯಾಣವನ್ನು ಅಂತ್ಯಗೊಳಿಸಲಿದೆ. ಮುಂಬೈ CSMTವರೆಗೆ ಈ ರೈಲು ಸಂಚರಿಸುವುದಿಲ್ಲ. ಅದೇ ರೀತಿ, ರೈಲು ಸಂಖ್ಯೆ 12134 ಮಂಗಳೂರು ಜಂಕ್ಷನ್–ಮುಂಬೈ CSMT ಎಕ್ಸ್‌ಪ್ರೆಸ್ ಜುಲೈ 30ರವರೆಗೆ ಠಾಣೆ ನಿಲ್ದಾಣದಲ್ಲೇ ತನ್ನ ಪ್ರಯಾಣವನ್ನು ಮುಕ್ತಾಯಗೊಳಿಸಲಿದೆ.
ಪ್ರಯಾಣಿಕರು ಈ ತಾತ್ಕಾಲಿಕ ಬದಲಾವಣೆಯನ್ನು ಗಮನಿಸಿ ತಮ್ಮ ಪ್ರಯಾಣವನ್ನು ಮುಂಚಿತವಾಗಿ ಯೋಜಿಸಿಕೊಳ್ಳುವಂತೆ ರೈಲ್ವೆ ಇಲಾಖೆ ಮನವಿ ಮಾಡಿದ್ದು, ಉಂಟಾಗುವ ಅನಾನುಕೂಲತೆಗೆ ವಿಷಾದ ವ್ಯಕ್ತಪಡಿಸಿದೆ.
