ಶಿರಸಿ: ಕಾರ್ ಪಲ್ಟಿಯಾಗಿ ಓರ್ವ ಬಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ತಾಲೂಕಿನ ಸಿರ್ಸಿಮಕ್ಕಿ ಬಳಿ ಶನಿವಾರ ಬೆಳಗ್ಗೆ ಸಂಭವಿಸಿದೆ.

ಅಮಾನುಲ್ಲಾ ಸೌದಾಗರ (10) ಮೃತಪಟ್ಟ ಬಾಲಕ‌ ಎಂದು ಗುರುತಿಸಲಾಗಿದೆ.

ಕಾರಿನಲ್ಲಿ (KA-31 P0705) ಒಂದೇ ಕುಟುಂಬದ ಐವರು ಪ್ರಯಾಣಿಸುತ್ತಿದ್ದರು. ಎಲ್ಲರೂ ಶಿರಸಿಯ ಕಸ್ತೂರಬಾ ನಗರದ ನಿವಾಸಿಗರಾಗಿದ್ದಾರೆ.

ಘಟನೆಯಲ್ಲಿ ಲಿಯಾಖತ್ ಮಹಮ್ಮದ್ ಅಲಿ ಸೌದಾಗರ ಹಾಗೂ ಶಿರಿನ್ ಬಾನು ಸೇರಿದಂತೆ ಇನ್ನಿರ್ವರು ಗಾಯಗೊಂಡಿದ್ದಾರೆ.

ಗಾಯಗೊಂಡ ಲಿಯಾಖತ್ ಇವರು ಭಟ್ಕಳದ ಶಿರೂರಿನ ದಾರೂಲ್ ಸುಲ್ ಶಾಲೆಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಶಾಲೆಗೆ ರಜೆ ಇದ್ದ ಕಾರಣದ ಲಿಯಾಖತ್ ತಮ್ಮ ಕುಟುಂಬ ಸಮೇತರಾಗಿ ಶಿರಸಿಗೆ ಬರುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.

ಸ್ಥಳೀಯ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.