Yellapur| ಇಲ್ಲಿನ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಇಸ್ಪೀಟ ಜೂಜಾಟ ನಡೆಸುತ್ತಿದ್ದವರ ಮೇಲೆ ಯಲ್ಲಾಪುರ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿದ್ದು, ಓರ್ವ ಆರೋಪಿ ಪರಾರಿಯಾಗಿದ್ದಾನೆ.
ಎಲೆಮಾನವರನ್ನು ಬಾಲಚಂದ್ರ (25), ಅಣ್ಣಪ್ಪ (28) ಹಾಗೂ ಪ್ರವೀಣ್ (30) ಎಂದು ಗುರುತಿಸಲಾಗಿದೆ. ಇನ್ನೊರ್ವ ಕಾಳಮ್ಮ ನಗರದ ಕಿರಣ ಸಿದ್ದಿ ಎಂಬಾತ, ಪೋಲಿಸರ ದಾಳಿಗೆ ಹೆದರಿ, ನಾಗಾಲೋಟದಿಂದ ಓಡಿ ಅರಣ್ಯ ಸೇರಿಕೊಂಡಿದ್ದಾನೆ.
ಇಲ್ಲಿನ ಕೆ. ಮೀಲನ ಕ್ರಾಸ್ ಸಮೀಪ ಬಸ್ ನಿಲ್ದಾಣದ ಹಿಂದಿನ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಇಸ್ಪೀಟ ಜೂಜಾಟ ನಡೆಯುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಯಲ್ಲಾಪುರ ಉಪನಿರೀಕ್ಷಕ ರಾಜಶೇಖರ್ ವಂದಲಿ ನೇತೃತ್ವದಲ್ಲಿ ಪೋಲಿಸರು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಆರೋಪಿಗಳಿಂದ ಒಟ್ಟು ₹2,150 ನಗದು ಹಾಗೂ ಜೂಜಾಟಕ್ಕೆ ಬಳಸುತ್ತಿದ್ದ ಇಸ್ಪೀಟ ಎಲೆಗಳು ಸೇರಿದಂತೆ ಇತರೆ ಸಾಮಗ್ರಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಯಲ್ಲಾಪುರ ಠಾಣೆಯಲ್ಲಿ ಕೆ.ಪಿ.ಎಕ್ಟ್ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
