ಕಾರವಾರ: ತಾಲೂಕಿನ ಹಣಕೋಣದ ದೇವಸ್ಥಾನವೊಂದರಲ್ಲಿ ಕಳ್ಳತನ ನಡೆದಿದ್ದು, ದೇವಸ್ಥಾನದ ನಂದಾ ದೀಪಗಳನ್ನೇ ಕಳ್ಳರು ಕದ್ದೊಯ್ದಿದ್ದಾರೆ.

ಹಣಕೋಣದ ಸಾತೇರಿ ಗ್ರಾಮ ಪುರುಷ ದೇವಸ್ಥಾನದಲ್ಲಿ ಕಳ್ಳತನ ನಡೆದಿದ್ದು, ಹಗಲಿನ ಸಮಯದಲ್ಲಿ ದೇವಸ್ಥಾನದ ಮುಖ್ಯ ಬಾಗಿಲು ತೆರೆದಿಟ್ಟ ವೇಳೆ ಕಳ್ಳರು ದೇವಸ್ಥಾನದಲ್ಲಿದ್ದ ಸುಮಾರು ನಾಲ್ಕು ಅಡಿ ಎತ್ತರದ ಎರಡು ನಂದಾ ದೀಪಗಳನ್ನು ಕಳ್ಳತನ ಮಾಡಿದ್ದಾರೆ. ಈ ನಂದಾ ದೀಪದ ಮೌಲ್ಯ 16 ಸಾವಿರ ಎಂದು ಅಂದಾಜಿಸಲಾಗಿದೆ.

ಈ ಕುರಿತು ದೇವಸ್ಥಾನದ ಅಧ್ಯಕ್ಷ ರಾಮದಾಸ ಸೈರೋಬಾ ನಾಯ್ಕ ಚಿತ್ತಾಕುಲಾ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.