Sirsi| ಬೈಕ್ಗೆ ಇಂಡಿಕೇಟರ್ ಹಾಕದೇ ಯು-ಟರ್ನ್ ಮಾಡಿದ ವಿಚಾರಕ್ಕೆ ಇಬ್ಬರು ಯುವಕರ ನಡುವೆ ಮಾತಿನ ಚಕಮಕಿ ನಡೆದು, ಬಳಿಕ ಅದು ಹೊಡೆದಾಟಕ್ಕೆ ತಿರುಗಿದ ಘಟನೆ ಶಿರಸಿ ನಗರದ ಮಾರ್ಕೆಟ್ ಪ್ರದೇಶದಲ್ಲಿ ನಡೆದಿದೆ.
ರಾಘವೇಂದ್ರ ಸಂಗಪ್ಪ ಹುಂಡೆಕರ್ ಹಾಗೂ ಮಹಮ್ಮದ್ ಆಸೀಫ್ ಎಂಬ ಇಬ್ಬರು ಯುವಕರು ಶಿರಸಿ ನಗರದ ಮುಬಾರಕ್ ಮೆಡಿಕಲ್ ಶಾಪ್ ಎದುರು ಶನಿವಾರ ರಾತ್ರಿ ಸುಮಾರು 8.30ರ ವೇಳೆಗೆ ಬೈಕ್ ಯು-ಟರ್ನ್ ವಿಚಾರವಾಗಿ ವಾಗ್ವಾದ ನಡೆಸಿದ್ದಾರೆ. ಮಾತಿನ ಚಕಮಕಿ ತೀವ್ರಗೊಂಡು ಇಬ್ಬರೂ ಸಾರ್ವಜನಿಕ ಸ್ಥಳದಲ್ಲೇ ಪರಸ್ಪರ ಬೈದಾಡಿಕೊಂಡು ಕೈ-ಕೈ ಮಿಲಾಯಿಸಿಕೊಂಡು ಹೊಡೆದಾಟ ನಡೆಸಿದ್ದಾರೆ.
ಘಟನೆಯ ವೇಳೆ ಸ್ಥಳದಲ್ಲಿ ಜನರು ಜಮಾಯಿಸಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸಾರ್ವಜನಿಕ ಸ್ಥಳದಲ್ಲಿ ಶಾಂತಿಭಂಗ ಉಂಟುಮಾಡಿದ ಆರೋಪದಡಿ ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.
