Siddapur | ಹಾಡುಹಗಲೇ ಮನೆಗೆ ನುಗ್ಗಿದ ಆಗಂತುಕನೊಬ್ಬ ನೇರವಾಗಿ ಮಹಿಳೆಯೊಬ್ಬಳ ಕುತ್ತಿಗೆಗೆ ಕೈಹಾಕಿ ಸುಮಾರು ಮೂರು ಲಕ್ಷ ಮೌಲ್ಯದ ಚಿನ್ನದ ಮಂಗಳಸೂತ್ರ ಕಿತ್ತೊಯ್ದ ಘಟನೆ ಸಿದ್ದಾಪುರದಲ್ಲಿ ನಡೆದಿದೆ.

ಸಿದ್ದಾಪುರದ ಸೊರಬ ರಸ್ತೆ ಹಾಳದಕಟ್ಟಾದ ಪದ್ಮರಾಜ್‌ ವಿಲ್ಲಾ ನಿವಾಸಿ ಪೂನಮ್‌ ಗಣಪತಿ ಶೇಟ್‌ (42) ಎಂಬುವವಳ ಚಿನ್ನವನ್ನೆ ಆಗುಂತಕ ಕಿತ್ತೊಯ್ದಿದ್ದು.  ಜೂನ್‌. 22 ರಂದು ಸುಮಾರು 4-22 ಗಂಟೆಗೆ ಸುಮಾರು 30 ವಯಸ್ಸಿನ ಅಪರಿಚಿತ, ಕೈಯಲ್ಲಿ ಕತ್ತಿ ಹಿಡಿದುಕೊಂಡು ಮಹಿಳೆಯ ಮನೆಗೆ ನುಗ್ಗಿದ್ದಾನೆ. ಆಕೆ ಧರಿಸಿದ ಬಂಗಾರ ತೆಗೆಯುವಂತೆ ಬೆದರಿಸಿದ್ದಾನೆ. ನಂತರ ಮಹಿಳೆಯ ಕುತ್ತಿಗೆಗೆ ಕೈ ಹಾಕಲು ಮುಂದಾದಾಗ ಅಕೆ ಆತನನ್ನು ದೂಡಿ ಹಾಕಿ ಮನೆಯಿಂದ ಹೊರಗೆ ಬರಲು ಪ್ರಯತ್ನಿಸಿದ್ದಾಳೆ. ಆಗ ಆ ವ್ಯಕ್ತಿಯು ಮಹಿಳೆಯ ಕುತ್ತಿಗೆಯಲ್ಲಿದ್ದ ಬಂಗಾರದ ತಾಳಿ ಸರ ಹಿಡಿದು ಎಳೆದಿದ್ದಾನೆ. ಎಳೆದ ರಭಸಕ್ಕೆ ತಾಳಿ ಸರ ತುಂಡಾಗಿ ಅರ್ದ ತಾಳಿ ಕಿತ್ತುಕೊಂಡು ಓಡಿ ಹೋಗಿದ್ದಾನೆ. ಅರ್ಧ ಸರದಲ್ಲಿ ಬಂಗಾರದ ತಾಳಿ ಸರದ ಅರ್ಧ ತುಂಡು ಕೊಂಡಿ ಸಮೇತ ಅಂದಾಜು ತೂಕ 12 ಗ್ರಾಂ ಮತ್ತು ತಾಳಿ ಸರಕ್ಕೆ ಹಾಕಿದ ಆಂಟಿಕ್ ಕ್ವಾಯಿನ್ ಪವನ್ ಕೊಂಡಿ ಸಹಿತ ಒಟ್ಟೂ 20 ಗ್ರಾಂ ತೂಕದ ಬಂಗಾರದ ತಾಳಿ ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆ. ಆತ ಅಂದಾಜು ಮೊತ್ತ ಮೂರು ಲಕ್ಷ ರೂಪಾಯಿ ಮೌಲ್ಯದ ಚಿನ್ನ ಕದ್ದು ಓಡಿದ್ದಾನೆ. ದೂಡಾಟದ ರಭಸಕ್ಕೆ ಮಹಿಳೆ ಕುತ್ತಿಗೆಗೆ ಗಾಯವಾಗಿದೆ.

ಆಗುಂತಕ ಚಿನ್ನ ಕಿತ್ತೊಯ್ದ ಬಗ್ಗೆ ಮಹಿಳೆ ಸಿದ್ದಾಪುರ ಠಾಣೆಗೆ ಆಗಮಿಸಿ ದೂರು ದಾಖಲಿಸಿದ್ದಾಳೆ. ಸಿದ್ದಾಪುರ ಠಾಣೆಯ ಪೋಲಿಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.