Haliyal| ರೌಡಿ ರಂಪಾಟ ಪ್ರಕರಣದಲ್ಲಿ ಅಮಾನತ್ತಾಗಿದ್ದ ಎಸ್ಸೈ ಬಸವರಾಜ ಜಾಗಕ್ಕೆ ಮಹೇಶ ಮಾಳಿ ನೂತನ ಎಸ್ಸೈ ಆಗಿ ಇಂದು ಗುರುವಾರ ಅಧಿಕಾರ ಸ್ವೀಕರಿಸಿದರು.

ಇತ್ತೀಚೆಗೆ ಹಳಿಯಾಳ ಮೌರ್ಯ ಬಾ‌ರ್ ಎದುರು ರೌಡಿ ಶೀಟರ್ ಮಚ್ಚ್ ಮಂಜ ಅಲಿಯಾಸ ಮಂಜುನಾಥ ಪೋಲಿಸರ‌ ಎದುರೇ ರಂಪಾಟ ಮಾಡಿದ್ದ. ಎಸ್ಸೈ ಬಸವರಾಜ ಅವರ ಜೀಪ್ ಅಡ್ಡಗಟ್ಟಿ ಗೂಂಡಾ ವರ್ತನೆ ತೋರಿದ್ದ. ರೌಡಿಯ ರಂಪಾಟದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಸಹ ಆಗಿತ್ತು. ಒಂದು ರೀತಿಯಲ್ಲಿ ಮೌರ್ಯ ಬಾರ್ ಎದುರು ಪೋಲಿಸರ ಶೌರ್ಯದ ಅನಾವರಣ ಸಹ ಆಗಿತ್ತು.

ಘಟನೆಯ ಬಗ್ಗೆ ಹಿರಿಯ ಪೋಲಿಸ್ ಅಧಿಕಾರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯದಲ್ಲಿದ್ದ ಎಸ್ಸೈ ಬಸವರಾಜ ಮಬನೂರ ಅವರನ್ನು ಅಮಾನತು ಹಾಗೂ ಎಂಟು ಜನ ಸಿಬ್ಬಂದಿಗಳನ್ನು ವರ್ಗಾವಣೆ ಮಾಡಿ ಬುಧವಾರ ಎಸ್ಪಿ ದೀಪನ್ ಎಂ.ಎನ್ ಆದೇಶಿಸಿದ್ದರು.

ಈ ಹಿನ್ನೆಲೆಯಲ್ಲಿ ಖಾಲಿಯಾದ ಎಸ್ಸೈ ಬಸವರಾಜ ಅವರ ಜಾಗಕ್ಕೆ ಮಹೇಶ ಮಾಳಿ ಅಧಿಕಾರ ಸ್ವೀಕರಿಸಿದರು.