Karwar| ಪೆಂಡಾಲ್ ತೆಗೆಯುವ ವೇಳೆ ವಿದ್ಯುತ್ ಶಾಕ್ ತಗುಲಿ ಕಾರ್ಮಿಕನೊಬ್ಬ ಸಾವನ್ನಪ್ಪಿದ ಘಟನೆ ಇಲ್ಲಿನ ನ್ಯೂ ಕೆಎಚ್ಬಿ ಕಾಲೋನಿಯಲ್ಲಿ ಇಂದು ಗುರುವಾರ ನಡೆದಿದೆ.
ಪದ್ಮನಾಭ ನಗರದ ಭರತ್ ಗೌಡ (30) ಎಂಬಾತನೇ ಸಾವನ್ನಪ್ಪಿದ ದುರ್ದೈವಿ. ಕೆ.ಎಚ್.ಬಿ ಕಾಲೋನಿಯ ಮನೆಯೊಂದರಲ್ಲಿ ನಡೆದ ಕಾರ್ಯಕ್ರಮಕ್ಕೆ ಪೆಂಡಾಲ್ ಹಾಕಲಾಗಿತ್ತು. ಆ ಪೆಂಡಾಲಿನ ಮೇಲೆ ತಗಡಿನ ಶೀಟು ಅಳವಡಿಸಿದ್ದರು. ಅದನ್ನು ತೆರವುಗೊಳಿಸುವಾಗ ಶೀಟು ಪಕ್ಕದಲ್ಲಿದ್ದ ವಿದ್ಯುತ್ ತಂತಿಗೆ ತಗುಲಿ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ನಗರಸಭೆ ಮಾಜಿ ಸದಸ್ಯ ಹಾಗೂ ಶಾಮಿಯಾನಾದ ಮಾಲಿಕ ಪ್ರೇಮಾನಂದ ಗುನಗಾ ಅವರ ಬಳಿ ಮೃತ ವ್ಯಕ್ತಿ ದುಡಿಯುತ್ತಿದ್ದ ಎನ್ನಲಾಗಿದೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
