ಕಾರವಾರದ ಬಿಲ್ಟ್ ವೃತ್ತದ ಬಳಿ ಗುರುವಾರ ಮಧ್ಯಾಹ್ನ ನೌಕಾನೆಲೆಯ ಸಿಬ್ಬಂದಿಯ ಕಾರು ಹಾಗೂ ಸಾರಿಗೆ ಬಸ್ ನಡುವೆ ಅಪಘಾತ ಸಂಭವಿಸಿದೆ.

ಘಟನೆಯಲ್ಲಿ ಕಾರಿನಲ್ಲಿದ್ದವರಿಗೆ ಗಾಯಗಳಾಗಿದ್ದು, ಕಾರಿನ‌ ಮುಂಭಾಗ ಸಂಪೂರ್ಣ ಜಖಂಗೊಂಡಿದೆ.

ನೌಕಾನೆಲೆಯ ಸಿಬ್ಬಂದಿಯಾದ ಗುನಾಜಿತ್ ಅವರು ತಮ್ಮ ಪುತ್ರನೊಂದಿಗೆ ಕಾರವಾರದಿಂದ ನೌಕಾನೆಲೆಯ ಕಡೆಗೆ ಕಾರನಲ್ಲಿ ತೆರಳುತ್ತಿದ್ದರು. ಈ ವೇಳೆ ಸವಣೂರು – ಕಾರವಾರ ಸಾರಿಗೆ ಬಸ್ ಬಿಲ್ಟ್ ವೃತ್ತದ ಬಳಿ ಬರುತ್ತಿದ್ದಂತೆ ಅಪಘಾತ ಸಂಭವಿಸಿದೆ.

ಬಿಲ್ಟ್ ಸರ್ಕಲ್ ತಿರುವಿನಲ್ಲಿ ಬಸ್ ಬಂದಾಗ ಕಾರು ಬಸ್‌ನ ಮುಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಏರ್ ಬ್ಯಾಗ್ ತೆರೆದಿದ್ದು ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಅಲ್ಲದೇ ಕಾರಿನ ಇಂಜೀನ್ ನಿಂದ ಆಯಿಲ್ ಕೂಡ ಸೋರಿಕೆಯಾಗಿದೆ. ಗಾಬರಿಗೊಂಡ ಸಾರ್ವಜನಿಕರು ಕಾರು ಚಾಲಕನನ್ನು ಹೊರ ಬರುವಂತೆ ತಿಳಿಸಿದ್ದಾರೆ. ಕೂಡಲೆ ಕಾರಿನ ಚಾಲಕ ಹಾಗೂ ಆತನ ಪುತ್ರ ಹೊರಬಂದಿದ್ದಾರೆ. ಈ ಅಪಘಾತದಲ್ಲಿ ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಕಾರವಾರ ಸಂಚಾರ ಠಾಣೆಯ ಪೊಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.