Bhatkal| ಮನೆ ಕಳ್ಳತನ ನಡೆಸಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ ಹಾಗೂ ನಗದು ಕದ್ದೊಯ್ದ ಪ್ರಕರಣವನ್ನು ಬೇಧಿಸಿರುವ ಭಟ್ಕಳ ಪೋಲಿಸರು, ಪ್ರಕರಣ ನಡೆದ ಎಂಟು‌ ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಿದ್ದಾರೆ.

ಭಟ್ಕಳದ ಗಣೇಶ ನಗರದ ಮಹಮದ್ ರಾಹಿಲ್ ತಂದೆ ಮಹಮದ್ ಮೀರಾ ಸಾಬ ಹಾಗೂ ನೌಶಾದ ತಂದೆ ಮುಕ್ತಾರ ಅಹಮದ್ ಹಂಚಿ ಎಂಬುವರೇ ಇಬ್ಬರು ಬಂಧಿತ ಆರೋಪಿಗಳು.

ಮೇ.18 ಹಾಗೂ ಮೇ.20 ನಡುವಿನ ಅವಧಿಯಲ್ಲಿ ಭಟ್ಕಳ ವ್ಯಾಪ್ತಿಯಲ್ಲಿ ಲರುವ ಮನೆಯೊಂದಕ್ಕೆ ಹೊಕ್ಕು ಮನೆಯ ಬೆಡ್ ರೂಮಿಗೆ ಹಾಕಿದ್ದ ಬೀಗವನ್ನು ಒಡೆದು ಕಪಾಟಿನಲ್ಲಿದ್ದ 24 ಗ್ರಾಂ ತೂಕದ 3.12 ಮೌಲ್ಯದ ಬಂಗಾರದ ಆಭರಣಗಳನ್ನು ಹಾಗೂ 37 ಸಾವಿರ ನಗದು ಹಣ ಕಳುವು ಮಾಡಿಕೊಂಡು ಹೋಗಿದ್ದರು. ಈ ಬಗ್ಗೆ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಪ್ರಕರಣದ ಪತ್ತೆಗಾಗಿ ತಂಡವೊಂದನ್ನು ರಚಿಸಿಕೊಂಡು, ಕಾರ್ಯಾಚರಣೆ ಕೈಗೊಂಡ ಭಟ್ಕಳ ಪೋಲಿಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಪ್ರಕರಣ ದಾಖಲಾದ ಎಂಟು ಗಂಟೆಯೊಳಗೆ ಈ ಇಬ್ಬರು ಆರೋಪಿಗಳನ್ನು ಬಂಧಿಸಿ, ಅವರಿಂದ ₹2.21 ಲಕ್ಷ ರೂ ಮೌಲ್ಯದ 17 ಗ್ರಾಂ ಬಂಗಾರದ ಆಭರಣ ಹಾಗೂ ನಗದು ₹ 22,860 ಗಳನ್ನು ಜಪ್ತು ಮಾಡಿದ್ದಾರೆ. ಪೋಲಿಸರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

ಕಾರ್ಯಾಚರಣೆಯಲ್ಲಿ ಭಟ್ಕಳ ಶಹರ ಪೊಲೀಸ ಠಾಣೆಯ ಪೊಲೀಸ ನಿರೀಕ್ಷಕ ದಿವಾಕರ ಪಿ.ಎಂ, ಇವರ ನೇತ್ರತ್ವದಲ್ಲಿ ಭಟ್ಕಳ ಶಹರ ಪೊಲೀಸ ಠಾಣೆಯ ಪಿಎಸ್ಸೈ ನವೀನ್ ನಾಯ್ಕ ಮತ್ತು ಸಿಬ್ಬಂದಿಗಳಾದ ದಿನೇಶ ನಾಯಕ, ಸತೀಶ ಭಟ್ಟ, ರವಿ ಪಟಗಾರ, ಜಗದೀಶ ನಾಯ್ಕ, ಕಿರಣ ಪಾಟೀಲ, ಕಾಶಿನಾಥ ಕೋಟಗುಣಸಿ, ಮಲ್ಲಿಕಾರ್ಜುನ ಉಟಗಿ, ವಿದ್ಯಾ ಆಚಾರಿ ಪಾಲ್ಗೊಂಡಿದ್ದರು.