Belagavi| ಅಂಕೋಲಾ ಮೂಲದ ವೈದ್ಯರೊಬ್ಬರು ಶೂಟೌಟ್ ಮಾಡಿಕೊಂಡು ಆತ್ಮಹತ್ಯೆ‌ ಮಾಡಿಕೊಂಡ ಘಟನೆ ಬೆಳಗಾವಿಯ ಟಿಳಕವಾಡಿವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಅಂಕೋಲಾ ಮೂಲದ ಡಾ. ದಿನೇಶ ಲಕ್ಷ್ಮಣ ಭಟ್ಕಳ ಎಂಬುವವರೇ ಆತ್ಮಹತ್ಯೆಗೆ ಶರಣಾದ ವೈದ್ಯ. ಬೆಳಗಾವಿಯ ಮಂಡೋಲಿ ರಸ್ತೆಯಲ್ಲಿನ ತಮ್ಮ ನಿವಾಸದಲ್ಲಿ ವೈದ್ಯ ಆತ್ಮಹತ್ಯೆಗೆ ಶರಣಾಗಿದ್ದಾರೆ. ತಮ್ಮ ಮನೆಯ ಗ್ಯಾಲರಿಯಲ್ಲಿ ತಲೆಗೆ ಶೂಟ್ ಮಾಡಿಕೊಂಡು ವೈದ್ಯ ಸಾವನ್ನಪ್ಪಿದ್ದಾರೆ.

ಅಂಕೋಲಾ ಮೂಲದವರಾಗಿದ್ದ ಡಾ. ದಿನೇಶ ಲಕ್ಷ್ಮಣ ಭಟ್ಕಳ ಬೆಳಗಾವಿಯ ಕೆಎಲ್ಇ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಲಂಗ್ಸ್ ಕ್ಯಾನ್ಸರ್‌‌ಗೆ ತುತ್ತಾದ ಹಿನ್ನೆಲೆಯಲ್ಲಿ ಮಾನಸಿಕವಾಗಿ ನೊಂದು ವೈದ್ಯರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಶಂಕಿಸಲಾಗಿದೆ.

ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದು, ಸ್ಥಳಕ್ಕೆ ಬೆಳಗಾವಿ ಟಿಳಕವಾಡಿ ಪೋಲಿಸ್ ಠಾಣೆಯ ಸಿಪಿಐ ಸೇರಿದಂತೆ ಸಿಬ್ಬಂದಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.