Sirsi| ಬ್ರಿಜ್ ಕೆಳಗೆ ಬೈಕ್ ಉರುಳಿ ಬಿದ್ದ ಪರಿಣಾಮ ಬೈಕ್ ಸವಾರ ಮೃತಪಟ್ಟು, ಬೈಕ್ ಮೇಲಿದ್ದ ಸಹ ಸವಾರರಾದ ತಾಯಿ ಮಗು ಪಾರಾದ ಘಟನೆ ಶಿರಸಿಯ ಹನುಮಂತಿ ಬಳಿ ನಡೆದಿದೆ.

ಹಾರುಗಾರದ ವೆಂಕಟರಮಣ ಗಣಪ ಗೌಡಾ (35) ಎಂಬಾತನೇ ಸಾವನ್ನಪ್ಪಿದ ಬೈಕ್ ಸವಾರ. ಈತ ಹಾರುಗಾರನಿಂದ ಹನುಮಂತಿಗೆ ತನ್ನ ಪತ್ನಿ ಹಾಗೂ ಮಗುವಿನೊಂದಿಗೆ ಬೈಕ್ ನಲ್ಲಿ (KA31E H1001) ಸಾಗುತ್ತಿದ್ದ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ಸೇತುವೆ ಕೆಳಗೆ ಬಿದ್ದು ದುರ್ಘಟನೆ ನಡೆದಿದೆ.

ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.