Karwar|Online Fraud|CEN-Cyber, Economic offences and Narcotics|ಸಾಮಾಜಿಕ ಜಾಲತಾಣಗಳಲ್ಲಿ ಬಂದ ಲಿಂಕವೊಂದನ್ನು‌ ಒತ್ತಿ ವ್ಯಕ್ತಿಯೊಬ್ಬರು ಬರೊಬ್ಬರಿ ₹50 ಸಾವಿರ ಕಳೆದುಕೊಂಡಿದ್ದಾರೆ.

ಕಾರವಾರದ ಡೋಬಿಘಾಟ ರಸ್ತೆಯ ಮೊಬೈಲ್ ರಿಪೇರಿ ಅಂಗಡಿಯ ಮೆಹಬೂಬಸಾಬ ಅಬ್ದುಲ್ ಖಾದರ ಲಾಡ್ಲೆವಾಲೆ (34) ಎಂಬುವರೇ ಲಿಂಕ್ ಒತ್ತಿ ಅರ್ಧ ಲಕ್ಷ ಕಳೆದುಕೊಂಡವರು.

ಮೆಹಬೂಬಸಾಬ್ ತಮ್ಮ ಮೊಬೈಲ ಫೋನನಲ್ಲಿ ಜಾಲತಾಣವನ್ನು ಬಳಸುತ್ತಿರುವಾಗ ಅವರ ಮೊಬೈಲ್ ಫೋನಗೆ ಒಂದು ಲಿಂಕ್ ಬಂದಿದೆ. ಅದನ್ನು ಅವರು ಕ್ಲಿಕ್ ಮಾಡಿದಾಗ, ಕೂಡಲೇ ಅವರ ಕೆನರಾ ಬ್ಯಾಂಕ ಖಾತೆಯಿಂದ ಒಟ್ಟೂ ರೂ. ₹50 ಸಾವಿರ ಕಡಿತವಾಗಿರುವ ಬಗ್ಗೆ SMS ಸಂದೇಶ ಬಂದಿದೆ.

ನಂತರ ಲಿಂಕ್ ಒತ್ತಿ ಹಣ ಕಳೆದುಕೊಂಡು ಮೋಸ ಹೋದೆ ಎಂದು ತಿಳಿದ ಮೆಹಬೂಬಸಾಬ್ ಕಾರವಾರದ CEN ಪೋಲಿಸ್ ಠಾಣೆಗೆ ದೂರು ದಾಖಲಿದ್ದಾರೆ.