Dandeli| ದಾಂಡೇಲಿಯ ಪೇಪರ್ ಮಿಲ್ ಆವರಣದಲ್ಲಿ ಅತಿಕ್ರಮಣವಾಗಿ ಪ್ರವೇಶಿಸಿ ಕಾರ್ಮಿಕರಿಗೆ ಪಾಂಪ್ಲೆಟ್ ಹಂಚಿ ಫ್ಯಾಕ್ಟರಿ ಆಡಳಿತದ ವಿರುದ್ಧ ಅಪಪ್ರಚಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಶಿವಾನಂದ ಗಗ್ಗರಿ ಸೇರಿದಂತೆ ನಾಲ್ವರು ವಿರುದ್ಧ ದಾಂಡೇಲಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಆರೋಪಿಗಳಾದ ಶಿವಾನಂದ ಗಗ್ಗರಿ ಹಾಗೂ ಇನ್ನೂ ಮೂವರು ವ್ಯಕ್ತಿಗಳು ಕಂಪನಿಯ ಸಂರಕ್ಷಿತ ಪ್ರದೇಶಕ್ಕೆ ಅನುಮತಿ ಪಡೆಯದೇ ಪ್ರವೇಶಿಸಿ, ‘ಈ ಫ್ಯಾಕ್ಟರಿ ಜನರಿಗೆ ಮೋಸ ಮಾಡುತ್ತಿದೆ’ ಎನ್ನುತ್ತಾ, ಕಾರ್ಮಿಕರಿಗೆ ಪಾಂಪ್ಲೆಟ್ ಹಂಚುತ್ತಾ ಫ್ಯಾಕ್ಟರಿ ಆಡಳಿತದ ವಿರುದ್ಧ ತಪ್ಪು ಮಾಹಿತಿ ಹರಡಿದರು ಎನ್ನಲಾಗಿದೆ.
ಈ ವೇಳೆ ಅಲ್ಲಿದ್ದ ಸೆಕ್ಯೂರಿಟಿ ಸಿಬ್ಬಂದಿ ಪ್ರಕಾಶ ಜಾಂಡೆ ಅವರು ಪಾಂಪ್ಲೆಟ್ ಹಂಚಲು ಆಡಳಿತ ಮಂಡಳಿಯ ಅನುಮತಿ ಪಡೆದಿದ್ದೀರಾ ಎಂದು ಪ್ರಶ್ನಿಸಿದಾಗ, ತಾನು ಕೂಡ ಈ ಫ್ಯಾಕ್ಟರಿಯಲ್ಲಿ ಮೂರು ಸಲ ಗೆದ್ದಿದ್ದೇನೆ. ನೀನು ಯಾರು ತನ್ನನ್ನು ಕೇಳಲು” ಎನ್ನುತ್ತಾ, ಕಂಪನಿಯ ಮ್ಯಾನೇಜಮೆಂಟ ನವರಿಗೆ ಹೋಗಿ ಹೇಳು ಅಂತಾ ‘ಉದರ ಜಾಕೆ ಬೋಲೋ ಗಾಂಡ್ ಮೆ ಧಮ್ ರಹಾತೋ..’ ಎಂದು ಅಶ್ಲೀಲವಾಗಿ ನಿಂದಿಸಿ ಬೆದರಿಕೆ ಹಾಕಿದರೆಂದು ದೂರಿನಲ್ಲಿ ಹೇಳಲಾಗಿದೆ.
ಈ ಸಂಬಂಧ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದಾಂಡೇಲಿ ಪೇಪರ್ ಮಿಲ್ ನ ಅಧಿಕಾರಿಗಳು ದೂರು ನೀಡಿದ್ದಾರೆ.
