ಅಂಕೋಲಾ : ವಾಣಿಜ್ಯ ಮತ್ತು ಗೃಹಬಳಕೆಯ ಗ್ಯಾಸ್ ದರ ಏರಿಕೆ ಖಂಡಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಅಂಕೋಲಾದಲ್ಲಿ ಪ್ರತಿಭಟನೆ ನಡೆಸಲಾಯಿತು.
ಅಂಕೋಲಾದ ಜೈ ಹಿಂದ್ ಸರ್ಕಲ್ನಲ್ಲಿ ಸೇರಿದ ಕಾಂಗ್ರೆಸ್ ಕಾರ್ಯಕರ್ತರು ಕಟ್ಟಿಗೆ ಒಲೆಹಚ್ಚಿ ಚಹಾ ತಯಾರಿಸಿ ಸಾರದವಜನಿಕರಿಗೆ ನೀಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ದೇಶದಲ್ಲಿ ಯುಪಿಎ ಸರ್ಕಾರ ಇದ್ದಾಗ ಬಿಜೆಪಿಗರು ಬೆಲೆಏರಿಕೆಯನ್ನೇ ಅಸ್ತ್ರವಾಗಿಸಿ ಚುನಾವಣೆಯಲ್ಲಿ ಪ್ರಚಾರ ನಡೆಸಿ ಅಧಿಕಾರಕ್ಕೆ ಬಂದಿದ್ದರು. ಆದ್ರೆ ಈಗ ಗೃಹಬಳಕೆ ಸಿಲೆಂಡರ್ ₹60 ಹಾಗೂ ವಾಣಿಜ್ಯ ಬಳಕೆ ಸಿಲೆಂಡರ್ ₹ 115 ಹೆಚ್ಚಳ ಮಾಡಿದ್ದಾರೆ. ಈಗ ಬಿಜೆಪಿಗರು ಮಾತ್ರ ಬಾಯಿಗೆ ಬೀಗ ಹಾಕಿಕೊಂಡಿದ್ದಾರೆ. ಇದೇ ರೀತಿ ಬೆಲೆ ಏರಿಕೆ ಮುಂದುವರೆದಲ್ಲಿ ಗ್ರಾಮ ಪಂಚಾಯತಿ ಮಟ್ಟದಲ್ಲೂ ಪ್ರತಿಭಟನೆ ಹಮ್ಮಿಕೊಳ್ಳಲಿದ್ದೇವೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿ ಗಾಂವ್ಕರ್ ಹೇಳಿದರು.
ಪ್ರತಿಭಟನೆಯಲ್ಲಿ ಕೆಪಿಸಿಸಿ ಜಿಲ್ಲಾ ಉಪಾಧ್ಯಕ್ಷ ಶಂಭು ಶೆಟ್ಟಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾರದ ರತನಸಿಂಗ್ ರಾಠೋಡ, ಇಂಟೆಕ್ ಜಿಲ್ಲಾ ಅಧ್ಯಕ್ಷೆ ಪೃಥ್ವಿ ಗುರು ನಾಯ್ಕ್, ಅಂಕೋಲಾ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ , ಮಂಜುಳಾ ವೇರಣೇಕರ್, ನಿವೃತ್ತ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ನಾರಾಯಣ ನಾಯ್ಕ್, ಸೇವಾದಳದ ಮಾಜಿ ಜಿಲ್ಲಾಧ್ಯಕ್ಷ ಆರ್.ಎಚ್. ನಾಯ್ಕ್, ಅಂಕೋಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಶ್ವರ ನಾಯ್ಕ್,
ಕಾರವಾರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಕಲ್ಗುಟ್ಕರ್, ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೇಶ್ ನಾಯ್ಕ್, ಯಲ್ಲಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಸ್. ಭಟ್, ಜಿಲ್ಲಾ ಕಾರ್ಯದರ್ಶಿ ಪ್ರಕಾಶ್ ನಾಯ್ಕ್,
ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ರಾಜೇಂದ್ರ ರಾಣೆ, ಅಂಕೋಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಪಾಂಡುರಂಗ ಗೌಡ, ಜಿ.ಪಂ ಮಾಜಿ ಸದಸ್ಯ ವಿನೋದ ಭಾಸ್ಗೋಡ್, ಯುವ ಕಾಂಗ್ರೆಸ್ ಅಧ್ಯಕ್ಷ ಅಮೋದ ಸಿರಸಿಕರ, ಅಂಕೋಲಾ ಯುವ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ ಖಾರ್ವಿ, ಜಿಲ್ಲಾ ಸೋಶಿಯಲ್ ಮೀಡಿಯಾ ಅಧ್ಯಕ್ಷ ಪ್ರಸನ್ನ ಶೆಟ್ಟಿ, ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಜಾತಾ ಗಾಂವ್ಕರ್, ಇಂಟೆಕ್ ಜಿಲ್ಲಾ ಉಪ್ಪಧ್ಯಕ್ಷೆ ರೇಣುಕಾ ಸಿದ್ದಿ, ಇಂಟೆಕ್ ಅಂಕೋಲಾ ತಾಲೂಕ ಅಧ್ಯಕ್ಷೆ ಪ್ರಿಯಾ ರಾಜೇಶ್ ನಾಯ್ಕ್,
ಇಂಟೆಕ್ ಅಂಕೋಲಾ ತಾಲೂಕ ಕಾರ್ಯದರ್ಶಿ ಅಮೃತ ಭಂಡಾರಿ, ಹಿರಿಯರಾದ ರಾಮು ಮೊಗೇರ, ಹೊನ್ನಪ್ಪ ನಾಯ್ಕ್, ಉದಯ ನಾಯ್ಕ್, ಮಂಜುಳಾ ಪೇಡನೇಕಾರ್, ದೀಪಾ ನಾಯ್ಕ್, ಶಾಂತಿ ಆಗೇರ, ಭವ್ಯ, ಸರಸ್ವತಿ ಗುನಗಾ, ಸಲ್ಮಾ ಶೇರಖಾನಿ, ಪೂಜಾ ನೇತ್ರೆಕರ್ ಹಲವು ಪ್ರಮುಖರು ಉಪಸ್ಥಿತರಿದ್ದರು.
