ಹಾವೇರಿ: ವರದಾ- ಬೇಡ್ತಿ ನದಿ ಜೋಡಣೆ 1994 ರಿಂದಲೇ ಪ್ರಸ್ತಾಪವಾಗುತ್ತಿದ್ದು, ಈ ಯೋಜನೆಗೆ ಸಂಪೂರ್ಣ ಬೆಂಬಲ ಇದೆ ಎಂದು ಹಾವೇರಿ ಜಿಲ್ಲೆಯ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಹೇಳಿದ್ದಾರೆ.

ಹಾವೇರಿಯಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಸಚಿವರು, ಯೋಜನೆ ಕುರಿತಂತೆ ಡಿ.ಪಿ.ಆರ್.ಮಾಡಲಾಗುತ್ತಿದೆ. ಯೋಜನೆ ಸಾಧಕ-ಬಾಧಕಗಳ ಕುರಿತು ತಜ್ಞರಿಂದ ಸಲಹೆ ಪಡೆದುಕೊಳ್ಳಲಾಗುವುದು. 1994ರಿಂದಲೇ ವರದಾ – ಬೇಡ್ತಿ ನದಿ ಜೋಡಣೆ ಕುರಿತು ಪ್ರಸಾಪ್ತವಾಗುತ್ತಿದೆ.

ನದಿ ನೀರು ಸದ್ಬಳಕೆಯಾಗಬೇಕು. ಪ್ರಕೃತಿಯ ಸದುಪಯೋಗ ಹಾಗೂ ಸದ್ವಿನಿಯೋಗಮಾಡಿಕೊಳ್ಳಬೇಕು. ಎಲ್ಲರೂ ಸೇರಿ ಚರ್ಚಿಸಿದಾಗ ಅನೇಕ ಸಮಸ್ಯೆಗಳು ಬಗೆಹರಿಯುತ್ತವೆ. ಈ ವಿಷಯದಲ್ಲಿ ರಾಜಕಾರಣ ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.