Sirsi| ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವಿಸಿ ತೇಲಾಡುತ್ತಿದ್ದ ಯುವಕನೊರ್ವನನ್ನು ಶಿರಸಿ ನಗರ ಠಾಣೆ ಪೋಲಿಸರು ಬಂಧಿಸಿದ್ದಾರೆ.
ಇಲ್ಲಿನ ರಾಮನಬೈಲಿನ ಕನ್ನಡ ಶಾಲೆ ಬಳಿಯ ನಿವಾಸಿ, ವೆಲ್ಡರ್ ಪೈಜಾನ ತಂದೆ ಅಬ್ದುಲ್ ಸಮದ ಮುಲ್ಲಾ (22) ಎಂಬಾತನೇ ಆರೋಪಿ.
ಈತ ಶಿರಸಿ ಶಹರದ ಕ್ಯಾಪ್ಟನ್ ಕ್ಯಾಂಪ್ ಕಡೆಗೆ ಹೋಗುವ ಕಚ್ಚಾ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ಯಾವುದೋ ಅಮಲು ಪದಾರ್ಥ ಸೇವನೆ ಮಾಡಿದ ಅನುಮಾನದ ಮೇಲೆ ಪೋಲಿಸರು ವಶಕ್ಕೆ ಪಡೆದು, ಪಂಡಿತ್ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಮಾಡಿಸಿದಾಗ, ವರದಿಯಲ್ಲಿ ಈತ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ Narcotic Drugs and Psychotropic Substances Act-1985 ಅಡಿ ಪ್ರಕರಣ ದಾಖಲಾಗಿದೆ.
