Karwar| ಕೆಪಿಸಿಸಿ ಮಾಜಿ ಕಾರ್ಯದರ್ಶಿ ಅಂಕೋಲಾದ ಗೋಪಾಲಕೃಷ್ಣ ನಾಯಕ ಮೇಲಿನ ಹಲ್ಲೆಯನ್ನು ಶಾಸಕ ಸತೀಶ ಸೈಲ್ ಖಂಡಿಸಿದ್ದಾರೆ.

ವಿಧಾನಸಭಾ ಅಧಿವೇಶನ ನಡೆಯುತ್ತಿರುವ ಈ ಸಮಯದಲ್ಲಿ ತಾನು ಬೆಂಗಳೂರಿನಲ್ಲಿದ್ದು, ಗೋಪಾಲ ಕೃಷ್ಣ ನಾಯಕ ಮೇಲಾದ ಹಲ್ಲೆ ಸುದ್ದಿ ತಿಳಿದ ತಕ್ಷಣ ತಾನು ಸಂಬಂಧಿತ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿ ಕೂಡಲೇ ಅಪರಾಧಿಗಳನ್ನು ಬಂಧಿಸುವಂತೆ ಸೂಚಿಸಿದ್ದೇನೆ. ಇದರ ಹಿಂದೆ ಇರುವ ಷಡ್ಯಂತ್ರವನ್ನು ಕೂಡಾ ಬಯಲು ಮಾಡಬೇಕೆಂದು ಪೋಲೀಸರಲ್ಲಿ ಒತ್ತಾಯಿಸಿದ್ದೇನೆ‌ ಎಂದು ತಿಳಿಸಿದ್ದಾರೆ.

ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿ ಈ ರೀತಿಯ ಕ್ರಿಮಿನಲ್ ಕೃತ್ಯ ನಡೆಸಿ ಶಾಂತಿ ಕದಡುವುದನ್ನು ತಾನು ಸಹಿಸುವುದಿಲ್ಲ ಎಂದು ಶಾಸಕ ಸತೀಶ ಸೈಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.