Karwar| ಮಂಗಳ ಲಕ್ಷದ್ವೀಪ ಎಕ್ಸ್‌ಪ್ರೆಸ್ ರೈಲಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 500 ಮಿಲಿ ಸಾಮರ್ಥ್ಯದ 24 ಕಿಂಗ್ ಫೀಶರ್ ಪ್ರೀಮಿಯಂ ಬಿಯರ್ ಕ್ಯಾನ್‌ಗಳನ್ನು ಅಬಕಾರಿ ಇಲಾಖೆ ವಶಕ್ಕೆ ಪಡೆದುಕೊಂಡಿದೆ.

ಕೇರಳ ಚುನಾವಣೆ ನಡೆಯುತ್ತಿರುವುದರಿಂದ ಅಕ್ರಮ ಮದ್ಯ ಸಾಗಾಟದ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ರೈಲ್ವೆ ತಪಾಸಣೆ ಬಿಗಿಗೊಳಿಸಿದೆ. ಕೇರಳಕ್ಕೆ ತೆರಳುವ ಪ್ರತಿ ರೈಲ್ವೆಯನ್ನು ತಪಾಸಣೆ ನಡೆಸುತ್ತಿದೆ. ಅದರಂತೆ
ಮಡಗಾವ್‌ನಿಂದ ಆಗಮಿಸಿದ್ದ ಮಂಗಳ ಲಕ್ಷದ್ವೀಪ ಎಕ್ಸ್‌ಪ್ರೆಸ್ ರೈಲಿನಲ್ಲಿ ತಪಾಸಣೆ ನಡೆಸಿದಾಗ, ಈ ವೇಳೆ ರೈಲಿನ ಒಂದು ಜನರಲ್ ಭೋಗಿಯಲ್ಲಿ 500 ಮಿಲಿ ಸಾಮರ್ಥ್ಯದ 24 ಕಿಂಗ್ ಫಿಶರ್ ಪ್ರೀಮಿಯಂ ಬಿಯರ್ ಕ್ಯಾನ್‌ಗಳನ್ನು ಹೊಂದಿದ್ದ ಬ್ಯಾಗ್ ಪತ್ತೆಯಾಗಿದೆ.

ಇದು ಕೇರಳ ರಾಜ್ಯ ಚುನಾವಣೆಗಾಗಿ ಕೊಂಡೊಯ್ಯಲಾಗುತ್ತಿತ್ತೋ ಅಥವಾ ಸ್ವಯಂ ಬಳಕೆಗಾಗಿ ಸಾಗಿಸಲಾಗುತ್ತಿತ್ತೋ ಎಂಬುದು ತಿಳಿದು‌ ಬಂದಿಲ್ಲ. ಅಬಕಾರಿ ಮೂಲದ ಪ್ರಕಾರ ಇಷ್ಟು ಸಣ್ಣ ಪ್ರಮಾಣದ ಮದ್ಯ ಕೇರಳಕ್ಕೆ ಸಾಗಾಟ ಮಾಡುತ್ತಿದ್ದುದು ಸುಳ್ಳು. ಬಹುತೇಕ ಸ್ವಯಂ ಬಳಕೆಗೆ ಅಥವಾ ಸ್ಥಳೀಯವಾಗಿ ಮಾರಾಟ ಮಾಡಲು ಗೋವಾದಿಂದ ತಂದಿದ್ದೀರಬಹುದು ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.

ಅಬಕಾರಿ ಇಲಾಖೆಯವರು ಪ್ರಕರಣ ದಾಖಲಿಸಿಕೊಂಡಿದ್ದಾರೆ.