Karwar| ಕಾರವಾರ ನಗರಸಭೆ ವ್ಯಾಪ್ತಿಯ ಜೋನ್-2 ಪ್ರದೇಶಕ್ಕೆ ನೀರು ಸರಬರಾಜು ಮಾಡುವ 300 ಎಂ.ಎಂ. ಮುಖ್ಯ ನೀರಿನ ಕೊಳವೆ ಒಡೆದು ಹೋಗಿರುವ ಹಿನ್ನೆಲೆಯಲ್ಲಿ ದುರಸ್ತಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ.
ಈ ಕಾರಣದಿಂದ ಜೂನ್ 4ರಿಂದ ಜೂನ್ 7ರವರೆಗೆ ಕಾಜುಬಾಗ, ಕೋಡಿಬಾಗ ಮುಖ್ಯ ರಸ್ತೆ, ನಂದನಗದ್ದಾ, ಮಧ್ಯವಾಡಾ, ಶಿವಾಜಿವಾಡಾ, ಟೋಲ್ನಾಕಾ, ತಾಮಸೆವಾಡಾ, ನದಿವಾಡ, ಅಂಬೇಡ್ಕರ್ ಕಾಲೋನಿ, ತೆಲಂಗ ರಸ್ತೆ, ಚಂದ್ರಾದೇವಿ ಹಾಗೂ ಗಿಂಡಿವಾಡಾ ಸುಂಕೇರಿವರೆಗೆ ವ್ಯಾಪ್ತಿಯ ಪ್ರದೇಶಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ನಗರಸಭೆ ತಿಳಿಸಿದೆ.
ಮೂರು ದಿನಗಳ ಕಾಲ ನೀರು ಪೂರೈಕೆಯಲ್ಲಿ ತೊಂದರೆ ಉಂಟಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಅಗತ್ಯ ಪ್ರಮಾಣದ ನೀರನ್ನು ಮುಂಚಿತವಾಗಿ ಸಂಗ್ರಹಿಸಿಕೊಂಡು ನಗರಸಭೆಯೊಂದಿಗೆ ಸಹಕರಿಸುವಂತೆ ಪೌರಾಯುಕ್ತರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
