Udupi| ನಟೋರಿಯಸ್ ರೌಡಿ ಗರುಡ ಗ್ಯಾಂಗಿನ ಮಹಮ್ಮದ್‌ ಅಲ್ಫಾಜ್‌ನನ್ನು ಉಡುಪಿ ಪೋಲಿಸರು ಗೂಂಡಾ ಕಾಯ್ದೆಯಡಿ ಬಂಧಿಸಿದ್ದಾರೆ.

ಉಡುಪಿ ಜಿಲ್ಲೆಯ ಬೈಂದೂರು ಪೊಲೀಸ್ ಠಾಣೆಯ ರೌಡಿ ಆಸಾಮಿ ಕುಂದಾಪುರದ ಮಹಮ್ಮದ್‌ ಅಲ್ಫಾಜ್‌ ತಂದೆ ಮೊಹಮ್ಮದ್‌ ಅಶ್ರಫ್‌ (25) ಎಂಬಾತನೇ ಬಂಧಿತ. ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಈತನನ್ನು ಗೂಂಡಾ ಕಾಯ್ದೆಯಡಿ ಬಂಧಿಸಲು ಉಡುಪಿ ಪೊಲೀಸ್‌ ಅಧೀಕ್ಷಕರ ವರದಿಯ ಮೇರೆಗೆ ಉಡುಪಿ ಜಿಲ್ಲಾ ದಂಡಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳು ಆದೇಶಿಸಿದ್ದರು.

ಗೂಂಡಾ ಆಸಾಮಿಯ ವಿರುದ್ದ ಉಡುಪಿ ಜಿಲ್ಲೆಯ ಶಿರ್ವಾ, ಗಂಗೊಳ್ಳಿ, ಬೈಂದೂರು, ಉಡುಪಿ ನಗರ, ಕುಂದಾಪುರ ಗ್ರಾಮಾಂತರ, ಕುಂದಾಪುರ ನಗರ ಠಾಣೆಯಲ್ಲಿ ಹಾಗೂ ನೆರೆಯ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ನಗರ ಠಾಣೆ ಸೇರಿದಂತೆ ಹಲವೆಡೆ ಕೊಲೆಯತ್ನ, ದರೋಡೆ, ಅಪಹರಣ ಮಾದಕ ವಸ್ತು ಸೇರಿದಂತೆ ಒಟ್ಟು ಹತ್ತು ಪ್ರಕರಣಗಳು ದಾಖಲಾಗಿದೆ. ಬಂಧಿತ ಆರೋಪಿಯನ್ನು ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಬಂಧನದಲ್ಲಿರಿಸಲು ಆದೇಶಿಸಲಾಗಿದೆ.