Karwar | ಯಾರು ಇಲ್ಲದ ಸಂದರ್ಭದಲ್ಲಿ ಮನೆಗೆ ಆಕಸ್ಮಿಕ ಬೆಂಕಿ ತಗಲಿ ಲಕ್ಷಾಂತರ ರೂಪಾಯಿ ನಷ್ಟವಾದ ಘಟನೆ ಕಾರವಾರ ನಗರದ ಬೈತಕೋಲದಲ್ಲಿ ನಡೆದಿದೆ.

ಬೈತಕೋಲದ ರಾಜೇಶ ಹರಿಶ್ಚಂದ್ರ ಖಾರ್ವಿ ಎಂಬುವವರ ಮನೆಗೆ ಬಿಂಕಿ ತಗುಲಿದ್ದು ಮನೆ ಭಾಗಶಃ ಸುಟ್ಟು ಕರಕಲಾಗಿದೆ. ಮನೆಯಲ್ಲಿದ್ದ ಟಿವಿ, ಸೋಪಾ, ಪ್ಯಾನ್ , ಮನೆಮಾಳಿಗೆಯ ರೀಪು, ಪಕಾಶಿ, ಹಂಚು ಸೇರಿದಂತೆ ಇನ್ನಿತರ ಬೆಲೆಬಾಳುವ ವಸ್ತುಗಳು ಬೆಂಕಿಗೆ‌ ಆಹುತಿಯಾಗಿದ್ದು ಅಂದಾಜು ನಾಲ್ಕು ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ತಿಳಿದುಬಂದಿದೆ.

ಅದೃಷ್ಟವಶಾತ್ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದ್ದು ಈ ಕುರಿತು ಮನೆ ಮಾಲಿಕ ರಾಜೇಶ ಹರಿಶ್ಚಂದ್ರ ಖಾರ್ವಿ ಕಾರವಾರ ಶಹರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಮದ್ಯಮ ವರ್ಗದ ರಾಜೇಶ್ ಅವರಿಗೆ ಸರ್ಕಾರ ಸೂಕ್ತ ಪರಿಹಾರ ಒದಗಿಸಿ ಕೊಡಬೇಕಿದೆ.