Karwar| ‘ಹೋದೆಯಾ ಪಿಶಾಚಿ ಅಂದರೆ, ಬಂದೇ ಗವಾಕ್ಷಿಯಲ್ಲಿ’ ಎಂಬುದು ಕನ್ನಡದ ಒಂದು ಜನಪ್ರಿಯ ಗಾದೆಮಾತು. ಒಂದು ಸಮಸ್ಯೆಯನ್ನು ಅಥವಾ ವ್ಯಕ್ತಿಯನ್ನು ಬಾಗಿಲಿನಿಂದ ಹೊರಹಾಕಿದರೆ, ಅವರು ಕಿಟಕಿಯ (ಗವಾಕ್ಷಿ) ಮೂಲಕ ಮರಳಿ ಬರುತ್ತಾರೆ. ಅಂದರೆ, ಒಂದು ತೊಂದರೆ ಪರಿಹಾರವಾಯಿತು ಎಂದುಕೊಳ್ಳುವಷ್ಟರಲ್ಲಿ, ಅದೇ ತೊಂದರೆ ಬೇರೆ ದಾರಿಯಲ್ಲಿ ಮರಳಿ ಬರುವುದು ಎಂದರ್ಥ.

ಈ ಮೊದಲು ಫುಟ್‌ಪಾತ್ ನಲ್ಲಿ ಅಳವದಿಸಿದ್ದ ಜಾಹೀರಾತು ಫಲಕ
ಇಲ್ಲಿನ ಸಮುದ್ರ ತೀರಕ್ಕೆ ತೆರಳುವ ಪ್ರಮುಖ ರಸ್ತೆಯ ಪುಟಪಾತ್ ಮೇಲೆ ಸ್ವಾಗತ ಚಿನ್ನದ ಅಂಗಡಿಯ ಜಾಹೀರಾತಿನ ಫ್ಲೆಕ್ಸ್ ನ್ನು ಶುಕ್ರವಾರ ಬೆಳಗ್ಗೆ ಅಳವಡಿಸಲಾಗಿತ್ತು. ಸಾರ್ವಜನಿಕರು ಓಡಾಡುವ ಪುಟಪಾತ್ ಮೇಲೆ ಈ ಫ್ಲೇಕ್ಸ್ ಅಳವಡಿಕೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪಕ್ಕೆ ಕಾರಣವಾಗಿತ್ತು. ಈ ಬಗ್ಗೆ Newswaveskannada.com ಸುದ್ದಿ ಮಾಡಿತ್ತು.

ನ್ಯೂಸ್ ವೇವ್ಸ್ ವರದಿಯಿಂದ ಎಚ್ಚೆತ್ತ ನಗರಸಭೆ ಅಧಿಕಾರಿಗಳು ಜಾಹಿರಾತು ಫಲಕ ತೆರವು ಗೊಳಿಸಿದ್ದು
ನಂತರ ಸುದ್ದಿಯಿಂದ ಎಚ್ಚೆತ್ತ ಕಾರವಾರ ನಗರಸಭೆಯ ಸಿಬ್ಬಂದಿ ಸ್ವಾಗತ ಜ್ಯುವೆಲರ್ಸ್ ಅವರ ಈ ಜಾಹೀರಾತು ಫ್ಲೇಕ್ಸ್ ನ್ನು ಪುಟಪಾತ್ ಮೇಲಿನಿಂದ ತೆರವುಗೊಳಿದ್ದರು.
ಆದರೆ ಬಿಟ್ಟು ಬಿಡದ ಬೇತಾಳದಂತೆ ಕಾರವಾರ ನಗರಸಭೆಯವರಿಗೇ ಚಾಲೆಂಜ್ ಮಾಡುವಂತೆ ತೆರವುಗೊಳಿಸಿದ ಫ್ಲೇಕ್ಸ್ ನ್ನು ಸ್ವಲ್ಪ ಮುಂದಿರುವ ಮುಖ್ಯ ರಸ್ತೆಯ ಪಕ್ಕವೇ ನಿಲ್ಲಿಸಿ ಕಾರವಾರ ನಗರಸಭೆಗೇ ಅಣಕಿಸಿದ್ದಾರೆ. ಮುಖ್ಯ ರಸ್ತೆಯ ಪಕ್ಕ ಈ ರೀತಿ ದೊಡ್ಡದಾದ ಫ್ಲೇಕ್ಸ್ ಅಳವಡಿಸಿರುವುದರಿಂದ ಈಗ ವಾಹನ ಸವಾರರು ವಾಹನ ತಿರುಗಿಸುವಾಗ ಮುಂದಿನ ದಾರಿ ಕಾಣದಂತಾಗಿ ಸಂಕಷ್ಟ ಅನುಭವಿಸುತ್ತಿದ್ದಾರೆ.

ಎರಡು ರಸ್ತೆಯ ಮದ್ಯ ಅವೈಜ್ಞಾನಿಕವಾಗಿ ಮತ್ತೆ ಜಾಹಿರಾತು ಫಲಕ ಅಳವಡಿಸುತ್ತಿರುವುದು
ಕಾರವಾರ ನಗರ ಜಿಲ್ಲಾ ಕೇಂದ್ರದ ಜೊತೆ ಹಲವು ರಾಷ್ಟ್ರೀಯ ಮಹತ್ವದ ಯೋಜನೆಗಳನ್ನು ಹೊಂದಿರುವ ಊರು. ಜೊತೆಗೆ ಅತ್ಯಂತ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಸಿಟಿ ಕೂಡಾ ಹೌದು. ಸಾರ್ವಜನಿಕ ಸ್ಥಳದಲ್ಲಿ ಈ ರೀತಿಯ ಅಪಾಯಕಾರಿಯಾಗಿ ಫ್ಲೆಕ್ಸ್ ಅಳವಡಿಸಲು ನಿರ್ಭಂಧ ಹಾಕಿ, ನಗರದಲ್ಲಿ ಫ್ಲೆಕ್ಸ್ ಹಾಕಲು ಒಂದಿಷ್ಟು ಕಟ್ಟಳೆಗಳನ್ನು ನಗರಸಭೆ ರೂಪಿಸಲಿ ಎಂಬುದು ಕಾರವಾರಿಗರ ಅನಿಸಿಕೆ.
ಪಾದಚಾರಿಗಳ ಸುರಕ್ಷತೆ ಮತ್ತು ಸಾರ್ವಜನಿಕ ಹಕ್ಕುಗಳನ್ನು ಕಾಪಾಡಲು ಸಂಬಂಧಿತ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಈ ಪ್ಲೇಕ್ಸ್ ತೆರವುಗೊಳಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
