ಅಂಕೋಲಾ ತಾಲೂಕಿನಲ್ಲಿ ಮಟ್ಕಾ ದಂಧೆ ಎಗ್ಗಿಲ್ಲದೇ ನಡೆಯುತ್ತಿದ್ದು, ಈ ಅಕ್ರಮ ಚಟುವಣಿಕೆಗಳಿಗೆ ಕಡಿವಾಣ ಹಾಕಬೇಕಿದ್ದ ಅಧಿಕಾರಿಗಳು ಮಾತ್ರ ಜಾಣ ನಿದ್ದೆಗೆ ಜಾರಿದ್ದಾರೆ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ. 

ನಾಯಿಕೊಡೆಗಳಂತೆ ತಿಂಗಳಿಗೊಬ್ಬ ಮಟ್ಕಾ ಬುಕ್ಕಿ ಹುಟ್ಟಿಕೊಳ್ಳುತ್ತಿರುವ ಪರಿಣಾಮ ಗಲ್ಲಿ ಗಲ್ಲಿಯ ಗುಡಂಗಡಿಗಳಲ್ಲಿಯೂ ಓಸಿ ನಂಬರ್ ಪಡೆಯುವವರು ಹುಟ್ಟಿಕೊಂಡಿದ್ದಾರೆ. 

ತುಂಬಾ ಕುತೂಹಲಕಾರಿ ವಿಚಾರ ಎನೆಂದರೆ, ಕೆಲ ದಿನಗಳ ಹಿಂದೆ ಅಂಕೋಲಾದಲ್ಲಿ ಮಟ್ಕ ಎಗ್ಗಿಲ್ಲದೆ ನಡೆಯುತ್ತಿದೆ ಎಂದು ಪತ್ರಿಕಾಗೋಷ್ಠಿ ಮಾಡಿ ಬಾಯಿಬಡಿದುಕೊಂಡಿದ್ದ ವ್ಯಕ್ತಿಯೂ ಸಹಃ ಈಗ ಮಟ್ಕಾ ಬುಕ್ಕಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ಈತ ಮೊದಲಿನಿಂದಲೂ ಮಟ್ಕಾ ಬುಕ್ಕಿಯಾಗಿದ್ದ. ಬದಲಾದ ರಾಜಕೀಯ ಸನ್ನಿವೇಶದಿಂದ ಈತನ ಸಿಂಹಾಸನಕ್ಕೆ ಕುತ್ತು ಬಂದಿತ್ತು. ಆಗ ಈ ಪ್ರಳಯಾಂತಕ ತಾತ್ಕಲಿಕವಾಗಿ ತನ್ನ ಮಟ್ಕಾ ಸಾಮ್ರಾಜ್ಯಕ್ಕೆ ಅಲ್ಪವಿರಾಮ ನೀಡಿದ್ದ. ಯಾವಾಗ ಮಟ್ಕ ದಂಧೆ ಕೆಲ ಕಾಲಕ್ಕೆ ಬಿಟ್ಟಿದ್ದನೋ ಆಗ ಈತನಿಗೆ ಊರಲ್ಲಿ ಮಟ್ಕ ಆಡುವುದು ಕಾನೂನು ಬಾಹಿರ ಚಟುವಟಿಕೆ ಎನಿಸತೊಡಿಗಿದೆ. 

ಆಸಂದರ್ಭದಲ್ಲಿ ‘ದೀಪ’ ದಂತಿತ್ತ ಈತ ಜ್ವಾಲಾಗ್ನಿಯಂತೆ ಬದಲಾಗಿ ಅಂಕೋಲಾದಲ್ಲಿ ಓಸಿ ಆಡಿಸುವವರ ವಿರುದ್ಧ ಪೊಲೀಸ್ ದೂರು ನೀಡುವುದಾಗಿ ಪತ್ರಿಕಾಗೋಷ್ಠಿ ಸಹಃ ನಡೆಸಿದ್ದ‌. ಈತನ ಪೌರುಷಕ್ಕೆ ಅಂಕೋಲಾದ ಅಧೀಕೃತ ಮಟ್ಕಾ ದಂಧೆಕೋರರು ದಂಗಾಗಿದ್ದರು. 

ಕಾಲ ಬದಲಾಂದಂತೆ ಅಂಕೋಲಾದಲ್ಲಿ ಮಟ್ಕಾ ಆಡಿಸುವವರ ವಿರುದ್ಧ ತಿರುಗಿಬಿದ್ದಿದ್ದ ಜ್ವಾಲಾಗ್ನಿ ಈಗ ಶಾಂತ ಸ್ವಾಬಾವದ ‘ದೀಪ’ ದಂತಾಗಿ ಮತ್ತೆ ಮಟ್ಕಾ ದಂಧೆ ಪ್ರಾರಂಭಿಸಿದ್ದನೆ.

ಪ್ರತಿದಿನ ಅಂಕೋಲಾ ಪೊಲೀಸರು ಗುಡಂಗಡಿಯಲ್ಲಿ 1 ರೂಪಾಯಿಗೆ 80 ರೂಪಾಯಿ ಕೊಡುವ ಆಟ ಆಡಿಸುತಿದ್ದವ ಎಂದು ದೂರು ದಾಖಲಿಸಿ ಬಡ ಗುಡಂಗಡಿ ಕಾರರ ಬುಡ ಮೇಲುಮಾಡುವ ಬದಲು ಈ ಗುಡಂಗಡಿ ಕಾರರಿಗೆ ಮಟ್ಕಾ ಆಡಿಸಲು ಬೆನ್ನೆಲುಬಾಗಿ ನಿಂತವರ ಬೆನ್ನು ಮೂಳೆ ಮುರಿಯಲಿ ಎಂದು ಸಾರ್ವಜನಿಕರು ಮಾತನಾಡತೊಡಗಿದ್ದಾರೆ.