Bhatkal| ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಅಮಲಿನಲ್ಲಿ ತೇಲಾಡುತ್ತಿದ್ದ ಇಬ್ಬರನ್ನು ಭಟ್ಕಳ ಪೋಲಿಸರು ಬಂಧಿಸಿದ್ದಾರೆ.
ಮೊದಲನೆಯ ಪ್ರಕರಣದಲ್ಲಿ, ಭಟ್ಕಳದ ಹೆಬಳೆಯ ಬದ್ರಿಯಾ ಕಾಲೋನಿಯ ಮೊಹಮ್ಮದ್ ಶೇಖ್ (32) ಬಂಧಿತ ಆರೋಪಿ. ವೃತ್ತಿಯಿಂದ ಚಾಲಕನಾಗಿರುವ ಈತ, ಪಟ್ಟಣದ ಪಿರ್ಧೋಸ್ ನಗರದ ಮೈದಾನದ ಬಳಿ ಚಿತ್ರ ವಿಚಿತ್ರನಾಗಿ ಅಮಲಿನಲ್ಲಿ ತೇಲಾಡುತ್ತಿದ್ದ. ಆಗ ಪೋಲಿಸರು ಆತನ ವಿಚಾರಣೆ ನಡೆಸಿದಾಗ ಗಾಂಜಾ ಸೇವಿಸಿದ್ದನ್ನು ಒಪ್ಪಿಕೊಂಡಿದ್ದಾನೆ. ಆದರೂ ಪೋಲಿಸರು ಮೊಹಮ್ಮದ್ ನ ವೈದ್ಯಕೀಯ ಪರೀಕ್ಷೆಯನ್ನು ಭಟ್ಕಳದ ಸರ್ಕಾರಿ ಆಸ್ಪತ್ರೆಯಲ್ಲಿ ಮಾಡಿದಾಗ ಈತ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ.
ಇನ್ನೊಂದು ಪ್ರಕರಣದಲ್ಲಿ ವೃತ್ತಿಯಿಂದ ಗೌಂಡಿಯಾಗಿರುವ ಭಟ್ಕಳದ ಜಾಲಿಯ ತಗ್ಗರಗೋಡ ನಿವಾಸಿ ಮೊಹಮ್ಮದ ಜಾಕೀರ್ ತಂದೆ ಅಬ್ದುಲ ರಜಾಕ್ (28) ಈತನೂ ಸಹ ಪಿರ್ಧೋಸ ನಗರ ಮೈದಾನದ ಸಾರ್ವಜನಿಕ ಸ್ಥಳದಲ್ಲಿ ವಿಚಿತ್ರವಾಗಿ ವರ್ತಿಸುತ್ತಿರುವುದನ್ನು ನೋಡಿ, ಪೋಲಿಸರು ವಿಚಾರಣೆ ನಡೆಸಿ, ವೈದ್ಯಕೀಯ ಪರೀಕ್ಷೆ ನಡೆಸಿದಾಗ ಈತನೂ ಸಹ ಗಾಂಜಾ ಸೇವಿಸಿದ್ದು ದೃಢಪಟ್ಟಿದೆ.
ಈ ಎರಡು ಪ್ರಕರಣದಲ್ಲಿ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಪಿ.ಎಸ್.ಐ ಮಲ್ಲಿಕಾರ್ಜುನಯ್ಯ ಕೊರಾಣಿ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿದ್ದಾರೆ.
