Karwar|Accident|ಕಾರವಾರ ತಾಲೂಕಿನ ಮಾಜಾಳಿಯ ವಿಠ್ಠಲ ರುಖುಮಾಯಿ‌ ದೇವಸ್ಥಾನದ ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಿನ್ನೆ ಗುರುವಾರ ರಾತ್ರಿ ನಡೆದ ಸ್ಕೂಟಿ ಅಪಘಾತದಲ್ಲಿ ಓರ್ವ ಸವಾರ ಮೃತಪಟ್ಟಿದ್ದಾನೆ.

ಶರಣ ಚಂದ್ರಕಾಂತ ಹರಿಕಂತ್ರ (23) ಮೃತ ಯುವಕ. ಈತನು ಸಂಕೇತ ಮಾಹಾದೇವ ವೆರ್ಣೇಕರ ಜತೆಗೆ ಗೋವಾಕ್ಕೆ ತೆರಳಿದ್ದ. ಮರಳಿ ಬರುವ ವೇಳೆ ಇಬ್ಬರು ನಿಯಂತ್ರಣ ತಪ್ಪಿ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ಸ್ಕೂಟಿ ನಜ್ಜುಗುಜ್ಜಾಗಿದ್ದು, ಸವಾರ ಹಾಗೂ ಹಿಂಬದಿ ಸವಾರನ ತಲೆ, ಕೈ ಕಾಲುಗಳಿಗೆ ಗಂಭೀರ ಗಾಯಗಳಾಗಿತ್ತು,

ನಂತರ ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಗೋವಾದ ಬಾಂಬೋಲಿಂ ಆಸ್ಪತ್ರೆಗೆ ಇಬ್ಬರನ್ನೂ ಗುರುವಾರ ರಾತ್ರಿಯೇ ದಾಖಲಿಸಲಾಗಿತ್ತು.

ಆದರೆ ಚಿಕಿತ್ಸೆ ಫಲಕಾರಿಯಾಗದೇ ಶರಣ ಚಂದ್ರಕಾತ ಹರಿಕಂತ್ರ ಮೃತಪಟ್ಟಿದ್ದಾನೆ.

ಈ ಕುರಿತು ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.