ಕಾರವಾರ ತಾಲೂಕಿನ ಚೆಂಡಿಯಾದ ಸುಬ್ರಹ್ಮಣ್ಯ ದೇವರ ವಾರ್ಷಿಕೋತ್ಸವ ಫೆ.22 ರವಿವಾರದಂದು ಅತೀ ವಿಜೃಂಭಣೆಯಿಂದ ನಡೆಯಲಿದೆ.
ಅಂದು ದೇವರ ಸನ್ನಿಧಿಯಲ್ಲಿ ಹೋಮ, ಹವನ, ಕುಂಕುಮಾರ್ಚನೆ,ಅಭಿಷೇಕ, ಪೂರ್ಣಾಹುತಿ,ಮಂಗಳಾರತಿ, ಮಹಾಪೂಜೆ, ಪ್ರಸಾದ ವಿತರಣೆ ನಂತರ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ ಪಲ್ಲಕ್ಕಿ ಮೆರವಣಿಗೆ, ರಂಗೋಲಿ ಸ್ಪರ್ಧೆ ಹಾಗೂ ಸೋಮವಾರ ದಂಹಿಕಾಲ ಉತ್ಸವ ಪ್ರಯುಕ್ತ ಮನರಂಜನೆ ಕಾರ್ಯಕ್ರಮ ಜರುಗಲಿದೆ.
ಈ ಎಲ್ಲಾ ಕಾರ್ಯಕ್ರಮಕ್ಕೆ ಭಕ್ತಾಧಿಗಳು, ಸಾರ್ವಜನಿಕರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೇಯೋಭಾಗಿಗಳಾಗಬೇಕಾಗಿ ದೇವಸ್ಥಾನ ಕಮಿಟಿಯ ಅಧ್ಯಕ್ಷ ದೀಪಕ ಉಗಾ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
