ಇಂದು ಶುಕ್ರವಾರ ಕೊಲೊಂಬೊದಲ್ಲಿ ನಡೆದ T20 WORLD CUP 2026ರ 19 ನೇ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡದ ವಿರುದ್ಧ ಜಿಂಬಾಬ್ವೆ ತಂಡ ಜಯಗಳಿಸುವ ಮೂಲಕ ಅಚ್ಚರಿ ಮೂಡಿಸಿದೆ.

ಆರಂಭದಲ್ಲಿ ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ 169 ರನ್ ಗಳಿಸಿತ್ತು. ಕಡಿಮೆ ಮೊತ್ತದ ಟಾರ್ಗೇಟ್ ನೀಡಿದ ಜಿಂಬಾಬ್ವೆ ವಿರುದ್ಧ ಆಸ್ಟ್ರೇಲಿಯಾ ಗೆಲ್ಲಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಜಿಂಬಾಬ್ವೆ ತಂಡದ ಆಟಗಾರರು ಕೆಚ್ಚೆದೆಯ ಹೋರಾಟ ಮಾಡಿ ವಿಜಯಲಕ್ಷ್ಮಿಯನ್ನು ಒಲಿಸಿಗೊಂಡಿದ್ದಾರೆ.

ಜಿಂಬಾಬ್ವೆ ನೀಡಿದ 169 ರನ್ನ ಗಳ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಜಿಂಬಾಬ್ವೆ ಬೌಲರ್ ಗಳ ಸಮಯೋಚಿತ ದಾಳಿಗೆ ತತ್ತರಿಸಿ 146 ರನ್ ಗೆ ತನ್ನೆಲ್ಲ ವಿಕೇಟ್ ಕಳೆದು ಕೊಂಡಿತು.

ಅಂತಿಮವಾಗಿ ಆಸ್ಟ್ರೇಲಿಯಾ ತಂಡ 23 ರನ್‌ ಗಳಿಂದ ಸೋಲೊಪ್ಪಿಕೊಂಡಿತು.